ಹಾವೇರಿ:ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮನೆಗೆ ಸಿದ್ದರಾಮಯ್ಯ ಭೇಟಿಕೊಟ್ಟ ಬಳಿಕ ಮಾಧ್ಯಮಕ್ಕೂ ಮಾತನಾಡಿದ್ದಾರೆ. ನವೀನ್ ದೇಹ ಇನ್ನೂ ಉಕ್ರೇನ್‌ನಲ್ಲಿಯೇ ಇದೆ. ಅದನ್ನ ಇಲ್ಲಿಗೆ ತರುವ ಕೆಲಸ ಕೂಡಲೇ ಆಗಬೇಕು ಅಂತಲೂ ಆಗ್ರಹಿಸಿದರು.
ನಟಿ ಜಯಮಾಲಾ ಸೇರಿದಂತೆ ಕಾಂಗ್ರೆಸ್‌ನ ಇತರರು ಸಿದ್ದರಾಮಯ್ಯನವರಿಗೆ ಜೊತೆಗೆ ನವೀನ್ ಮನೆಯವರಿಗೆ ಸಾಂತ್ವನ ಹೇಳಿದರು.
PublicNext
09/03/2022 01:57 pm