ಲಖನೌ: ಮತ ಎಣಿಕೆಗೆ ಕೇವಲ ಎರಡು ದಿನಗಳ ಮೊದಲು ವಾರಾಣಸಿಯ ಮತ ಎಣಿಕೆ ಕೇಂದ್ರದಿಂದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನ ಕದಿಯಲಾಗುತ್ತಿದೆ. ಇದು ಸರ್ಕಾರದ “ಕಳ್ಳತನ” ಎಂದು ಸಮಾಜವಾದಿ ಪಕ್ಷದ ನಾಯಕ ಹಾಗು ಮಾಜಿ ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಟ್ರಕ್ʼನಲ್ಲಿರುವ ಕೆಲವು ಇವಿಎಂಗಳ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅಖಿಲೇಶ್, ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಇವಿಎಂಗಳು ಮತದಾನಕ್ಕೆ ಬಳಸಲಾಗಿಲ್ಲ ಮತ್ತು ಅವುಗಳನ್ನ ಕೇವಲ 'ಹ್ಯಾಂಡ್-ಆನ್ ತರಬೇತಿ'ಗೆ ಬಳಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ, “ಕೆಲವು ರಾಜಕೀಯ ಪಕ್ಷಗಳು ವದಂತಿಗಳನ್ನ ಹರಡುತ್ತಿವೆ” ಚುನಾವಣೆಯಲ್ಲಿ ಬಳಸಲಾದ ಇವಿಎಂಗಳನ್ನ “ಸಿಆರ್‌ಪಿಎಫ್ ವಶದಲ್ಲಿರುವ ಸ್ಟ್ರಾಂಗ್ ರೂಮ್ʼನಲ್ಲಿ ಮುಚ್ಚಲಾಗಿದೆ ಮತ್ತು ಸಿಸಿಟಿವಿ ಕಣ್ಗಾವಲು ಇದೆ. ಇದನ್ನ ಎಲ್ಲಾ ರಾಜಕೀಯ ಪಕ್ಷಗಳ ಜನರು ವೀಕ್ಷಿಸುತ್ತಿದ್ದಾರೆ” ಎಂದು ಹೇಳಿದರು. ಇವಿಎಂಗಳು ಮಂಡಿ ಎಣಿಕೆ ಕೇಂದ್ರದ ಶೇಖರಣಾ ಪ್ರದೇಶದಿಂದ ಸ್ಥಳೀಯ ಕಾಲೇಜಿಗೆ ಹೋಗುತ್ತಿವೆ ಎಂದು ಹೇಳಿದರು. ನಂತರ, ಕಾರ್ಮಿಕರು ಶೂನ್ಯಗೊಳಿಸಿದ 20 ಇವಿಎಂಗಳನ್ನು ಹೊತ್ತ ವಾಹನವು “ಇಲ್ಲಿದೆ” ಮತ್ತು ಅದನ್ನು ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
PublicNext
08/03/2022 11:01 pm