ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಸ್‌ವೈ 79ನೇ ಹುಟ್ಟು- ರಾಧಾಕೃಷ್ಣರಿಗೆ ವಿಶೇಷ ಪೂಜೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಜನ್ಮದಿನದಂದು ಹಿನ್ನೆಲೆಯಲ್ಲಿ ಸಂಜಯನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಿಎಸ್‌ವೈ ಜನ್ಮದಿನದ ಪ್ರಯುಕ್ತ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ವಿಶೇಶ ಪೂಜೆ ನೆರವೇರಿತು. 79ನೇ ಜನ್ಮದಿದಂದು ದೇವರಿಗೆ ಪೂಜೆ ಸಲ್ಲಿಸಿದ ಬಿಎನ್‌ವೈ ಟೆಂಪಲ್ ರನ್ ನಡೆಸಿ ಕಾವೇರಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ಇನ್ನು ಬಿ.ಎಸ್.ವೈ ಜನ್ಮ ದಿನದ ಪ್ರಯುಕ್ತ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಬಡವರಿಗೆ ಸೀರೆ ವಿತರಣೆ ಹಾಗೂ ಅನ್ನದಾನವನ್ನು ಆಯೋಜಿಸಿದರು. ತಂದೆ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಹಾಗೂ ಬಿ.ವೈ ರಾಘವೇಂದ್ರ ಕೂಡ ಭಾಗಿಯಾಗಿದ್ದರು.

Edited By : Manjunath H D
PublicNext

PublicNext

27/02/2022 07:05 pm

Cinque Terre

45.45 K

Cinque Terre

0

ಸಂಬಂಧಿತ ಸುದ್ದಿ