ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಿಯಾಂಕಾ ಗಾಂಧಿಯ ಕೈ ಕುಲುಕಿದ ಬಿಜೆಪಿ ಕಾರ್ಯಕರ್ತರು

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸದ್ಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಹಂತದ ಚುನಾವಣಾ ಪ್ರಚಾರ ನಡೆದಿದ್ದು ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

ಚುನಾವಣಾ ಪ್ರಚಾರ ರ್ಯಾಲಿಯ ಭಾಗವಾಗಿ ಅವರು ರೋಡ್ ಶೋ ನಡೆಸುವಾಗ ಅಲ್ಲಿ ಬಂದ ಕೆಲ ಬಿಜೆಪಿ ಧ್ವಜ ಹಿಡಿದ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೈ ಕುಲುಕಿದ್ದಾರೆ. ಅವರ ಕಡೆ ಮುಗುಳ್ನಗೆ ಬೀರಿದ ಪ್ರಿಯಾಂಕಾ ಗಾಂಧಿ ಎಲ್ಲರೊಂದಿಗೆ ಕೈಕುಲುಕಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

23/02/2022 08:20 pm

Cinque Terre

102.03 K

Cinque Terre

13

ಸಂಬಂಧಿತ ಸುದ್ದಿ