ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದನದಲ್ಲಿ ಇಲಿಗಳು ಬಂದ್ರೆ ನಾನು ಬಿಟ್ಟದ್ದು ಅಂತ ಮಾತ್ರ ಹೇಳ್ಬೇಡಿ !

ಬೆಂಗಳೂರು:ಕಾಂಗ್ರೆಸ್ ನವ್ರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಆದರೆ ಇದೇ ವೇಲೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸಿದ್ದರಾಮಯ್ಯನವರನ್ನ ಭೇಟಿ ಕೂಡ ಆಗಿದ್ದಾರೆ. ಆಗ ಇಲ್ಲೊಂದಿಷ್ಟು ಸ್ವಾರಸ್ಯಕರ ಚರ್ಚೆಗಳೂ ನಡೆದಿವೆ.ಬನ್ನಿ, ಹೇಳುತ್ತಿವೆ.

ಮೊಗಸಾಲೆಯಲ್ಲಿಯೇ ವಿಶ್ವೇಶ್ವರ ಹೆಗೆಡೆ ಕಾಗೇರಿ ಸಿದ್ದರಾಮಯ್ಯನವರನ್ನ ಮೀಟ್ ಆಗಿದ್ದಾರೆ. ಏನಾದರೂ ಅಗತ್ಯ ಇದ್ದರೆ ಹೇಳಿ ಅಂತಲೇ ಹೇಳ್ತಾರೆ. ಆಗ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಇಲಿಗಳು ಕಾಟಕೊಟ್ಟಿದ್ದವು ಅಂತಲೇ ನೇರವಾಗಿ ಹೇಳಿ ಬಿಡ್ತಾರೆ.

ಆಗ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮಧ್ಯೆ ಪ್ರವೇಶಿ ಮಾತನಾಡುತ್ತಾರೆ. ಈಗಾಗಲೇ ಸಾನಿಟೈಸರ್ ಮಾಡಿದ್ದೇವೆ. ಎಲ್ಲೋ ಸಣ್ಣ ಪುಟ್ಟ ಇಲಿಗಳಿರಬಹುದು ಅಂತಲೇ ಹೇಳಿ ಬಿಡ್ತಾರೆ.

ಇದೇ ಮಾತಿಗೆ ಕಾಗೇರಿ ಏನ್ ಹೇಳ್ತಾರೆ ಗೊತ್ತೇ ? ಹೌದು. ಒಂದು ವೇಳೆ 'ಇವತ್ತು ಹೆಗ್ಗಣಗಳು ಇಲಿಗಳು ಕಂಡು ಬಂದರೇ, ಅದನ್ನ ನಾನೇ ಬಿಟ್ಟದ್ದು ಅಂತ ಮಾತ್ರ' ಹೇಳಿಬೇಡಿ ಅಂತಲೇ ಹೇಳ್ತಾರೆ. ಆಗ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿ ಬಿಡ್ತಾರೆ.

Edited By :
PublicNext

PublicNext

17/02/2022 09:22 pm

Cinque Terre

79.93 K

Cinque Terre

3

ಸಂಬಂಧಿತ ಸುದ್ದಿ