ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇದಿಕೆ ಮೇಲೆ ಕುಸಿದು ಬಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್

ಚಂಡೀಗಡ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೇದಿಕೆ ಮೇಲೆ ಕುಸಿದು ಬಿದ್ದ ಘಟನೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ನಡೆದಿದೆ. ಈ ಘಟನೆ ನಿನ್ನೆ (ಬುಧವಾರ) ನಡೆದಿದ್ದು ಎನ್ನಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚುನಾವಣಾ ರ‍್ಯಾಲಿ ನಿನ್ನೆಯಲ್ಲಿ ವೇದಿಕೆ ಮೇಲೆ ಇದ್ದ ಬಿಜೆಪಿ ನಾಯಕರಿಗೆ ಫರೀದ್‌ಕೋಟ್‌ ಸ್ಥಳೀಯ ಮುಖಂಡರು ಬೃಹತ್​ ಹಾರ ಹಾಕಲು ಮುಂದಾದರು. ಆದರೆ ನೂಕಾಟದಲ್ಲಿ ರಾಜನಾಥ್ ಸಿಂಗ್ ಕುಸಿದು ಕೆಳಗೆ ಬಿದ್ದಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳದೆ ವೇದಿಕೆಯಲ್ಲಿದ್ದವರು ಹಾರ ಹಾಕಲು ಯತ್ನಿಸಿದರೇ ಹೊರತು ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಲಿಲ್ಲ. ಇದರಿಂದ ಕೋಪಗೊಂಡಂತೆ ಕಂಡುಬಂದ ಅವರು ಹಾರವನ್ನು ಹಾಕಿಸಿಕೊಳ್ಳಲು ನಿರಾಕರಿಸಿ, ಅವರಿಗೇ ಹಾಕಿ ಎಂಬಂತೆ ಕೈ ಸನ್ನೆ ಮಾಡಿದರು.

Edited By : Vijay Kumar
PublicNext

PublicNext

17/02/2022 07:58 pm

Cinque Terre

84.49 K

Cinque Terre

3

ಸಂಬಂಧಿತ ಸುದ್ದಿ