ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಸರಿ ಶಾಲಿನ ಕುರಿತು ಅವಹೇಳನ ಕಾರಿ ಪೋಸ್ಟ್ ಮಾಡಿದವನ ಮೇಲೆ ಎಫ್ ಐಆರ್

ತುಮಕೂರು: ರಾಜ್ಯದಲ್ಲಿ ಹಿಜಾಬ್ ಚರ್ಚೆ ಜೋರಾಗಿ ನಡೆಯುತ್ತಿದೆ.‌ ಸದ್ಯ ತಣ್ಣಗಾಗಿರುವ ಹಿಜಾಬ್ v/s ಕೇಸರಿ ಶಾಲು ಗಲಾಟೆ ಬೂದಿ ಶಮನ ಮಾಡಲು ಸಾಕಷ್ಟು ಕಸರತ್ತು ನಡೆಯುತ್ತಿದೆ. ಈ ಮಧ್ಯೆ ಪೊಲೀಸ್ರು ಕೋಮು ಗಲಭೆ ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಹಿಜಾಬ್ ಮತ್ತು ಕೇಸರಿ ಶಾಲಿನ ಪರ- ವಿರೋಧ ಯಾವುದೇ ಪೋಸ್ಟ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ಹೀಗಿದ್ರು ಕೆಲ‌ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಶಾಲ್ ಬಗ್ಗೆ ತುಚ್ಚ‌ವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಸುಭಾಷ್ ಭಕ್ತರಹಳ್ಳಿ ಮುಖಪುಟದಲ್ಲಿ ಕೇಸರಿ ಶಾಲ್ ನ ಭಯೋತ್ಪಾದಕರಿಗೆ ಹೋಲಿಸಿ ಸಹ ಬರೆದಿದ್ದು, ಈ ಬಗ್ಗೆ ಕುಣಿಗಲ್ ಠಾಣೆಯಲ್ಲಿ ಆ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

Edited By : Nagesh Gaonkar
PublicNext

PublicNext

16/02/2022 08:08 am

Cinque Terre

34.2 K

Cinque Terre

6

ಸಂಬಂಧಿತ ಸುದ್ದಿ