ಹಾಸನ: ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ನಗೆ ಚಟಾಕಿ ಹಾರಿಸುವ ಮೂಲಕ ಎಲ್ಲರನ್ನೂ ನಗೆಗಡಿಲಿನಲ್ಲಿ ತೇಲಿಸಿದರು.
ನಿನ್ನೆ (ಗುರುವಾರ) ನಡೆದ ಕಾರ್ಯಕ್ರಮದಲ್ಲಿ ರೇವಣ್ಣ ಅವರು ಜನರತ್ತ ಮೂರು ನಿಂಬೆಹಣ್ಣು ಎಸೆದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಉಪಸ್ಥಿತರಿದ್ದರು. ವೇದಿಕೆ ಮೇಲೆ ಕುಳಿತಿದ್ದ ರೇವಣ್ಣನವರಿಗೆ ಮೊದಲು ಶಾಸಕ ಶಿವಲಿಂಗೇಗೌಡ ನಿಂಬೆ ಹಣ್ಣು ನೀಡಿ ಕಾಲೆಳೆದರು. ಆಗ ಫ್ಯಾನ್ಸ್ ಅಣ್ಣೋ ನಮಗೂ ನಿಂಬೆ ಹಣ್ಣು ಕೊಡಿ ಅಂತ ಕೇಳಿದರು. ಆಗ ರೇವಣ್ಣ ವೇದಿಕೆ ಮೇಲಿಂದ ಒಂದೊಂದೇ ನಿಂಬೆ ಹಣ್ಣು ಎಸೆದರು. ರೇವಣ್ಣ ಎಸೆದ ನಿಂಬೆ ಹಣ್ಣುಗಳನ್ನು ಅಭಿಮಾನಿಗಳು ಒಂದೊಂದಾಗಿಯೇ ಆಯ್ದುಕೊಂಡಿದ್ದಾರೆ.
PublicNext
11/02/2022 10:51 am