ಬೆಂಗಳೂರು: ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಸ್ವತ ಲೋಕದ ಮಿನುಗುತಾರೆ ಲತಾ ಮಂಗೇಶ್ಕರ್ ಗಾನಲೋಕವನ್ನ ಶ್ರೀಮಂತಗೊಳಿಸಿದ್ದಾರೆ. ಲತಾ ಕೇವಲ ಸಿನಿಮಾ ಹಾಡಿಗೆ ಮಾತ್ರ ಸೀಮಿತರಾಗಿರಲಿಲ್ಲ. ‘ಏ ಮೇರಿ ವತನ್ ಕೆ ಲೋಗೋ’ ಹಾಡು ಕೇಳಿದಾಗ ಕಣ್ಣೀರು ಬರುತ್ತದೆ. ಈ ಲೋಕ ಇರುವವರೆಗೂ ಲತಾ ಮಂಗೇಶ್ಕರ್ ಹಾಡು ಇದ್ದೇ ಇರುತ್ತೆ. ಲತಾ ಮಂಗೇಶ್ಕರ್ ಹೆಸರು ಚಿರಸ್ಥಾಯಿಯಾಗಿದೆ. ಗಾನ ಕೋಗಿಲೆ ಹಾಡು ನಿಲ್ಲಿಸಿದ್ದು ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
PublicNext
06/02/2022 11:48 am