ನವದೆಹಲಿ : ತಲೆಯಿಲ್ಲದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತವು ಗಣ್ಯ ಅತಿಥಿಯನ್ನು ಹೊಂದುವಲ್ಲಿ ವಿಫಲವಾಗಿದೆ. ಅದು ಯಾಕೆ ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಭಾರತ ಇಂದು ಒಂದು ದ್ವೀಪದಂತೆ ಪ್ರತ್ಯೇಕಗೊಂಡಿದೆ. ಸುತ್ತಲೂ ವೈರಿಗಳಿಂದ ಸುತ್ತುವರಿದಿದೆ ಎಂದು ಭಾಷಣದಲ್ಲಿ ರಾಗಾ ವ್ಯಾಖ್ಯಾನಿಸಿದ್ದಾರೆ.
ಭಾರತ ಒಂದು ರಾಷ್ಟ್ರ ಅಲ್ಲ ಅಂತಾರೆ! ಚೀನಾ ದೃಷ್ಟಿಕೋನ ಸ್ಪಷ್ಟವಾಗಿದೆ ಎಂದು ನಮ್ಮ ವಿರೋಧಿ ರಾಷ್ಟ್ರವನ್ನು ಹಾಡಿಹೊಗಳುತ್ತಾರೆ! ಅವರೇನು ಚೀನಾವನ್ನು ಬೆಂಬಲಿಸಲು ಸಂಸತ್ತಿಗೆ ಬಂದಿದ್ದಾರಾ ಎಂದು ಜೋಶಿ ಸಂಸತ್ತಿನಲ್ಲಿಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದ ವಿದೇಶಾಂಗ ನೀತಿಯಲ್ಲಿ ಪ್ರಸ್ತುತ ಸರ್ಕಾರ ಮೂಲಭೂತ ತಪ್ಪು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದರು. ಚೀನಾದವರು ಡೋಕ್ಲಾಮ್ ಮತ್ತು ಲಡಾಖ್ ಬಗ್ಗೆ ಸ್ಪಷ್ಟ ಯೋಜನೆ ಹೊಂದಿದೆ. ಇದು ಭಾರತಕ್ಕೆ ಗಂಭೀರ ಅಪಾಯ ತರಬಲ್ಲದು. ಹಾಗಾಗಿ ನಮ್ಮ ವಿದೇಶಾಂಗ ನೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ತಪ್ಪು ಮಾಡಿದ್ದೇವೆ ಎಂದು ರಾಹುಲ್ ಲೋಕಸಭೆಯಲ್ಲಿ ಜರಿದಿದ್ದರು.
PublicNext
03/02/2022 03:28 pm