ತುಮಕೂರು : ಯುಜಿಡಿ ಸಮಸ್ಯೆ ಬಗೆಹರಿಸದ ಪುರಸಭೆ ಅಧಿಕಾರಿಗಳು ಶಾಸಕರ ವಿರುದ್ಧ ಸ್ವಾಮೀಜಿ ರೊಚ್ಚಿಗೆದ್ದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.
ಶಾಸಕ ವೀರಭದ್ರಯ್ಯ ಹೋಪ್ಲೆಸ್ ಎಂದ ರಾಮಕೃಷ್ಣ ಆಶ್ರಮದ ನಿರ್ಮಲಾನಂದ ಸ್ವಾಮೀಜಿ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸದೇ ಅಂಗಡಿ, ಮಳಿಗೆ ಕಲೆಕ್ಷನ್ ಗೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುಜಿಡಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ರು ತಲೆ ಕೆಡಿಸಿಕೊಳ್ಳದೇ ಕಲೆಕ್ಷನ್ ಗೆ ಬಂದಿದ್ದಿರಿ ಆ ಹೋಪ್ಲೆಸ್ ಶಾಸಕನು ಹಾಗೆ ಇದ್ದಾನೆ ಎಂದು ಕಿಡಿಕಾರಿದರು.
ಈ ವೇಳೆ ಕೆಲ ಕಾಲ ಅಧಿಕಾರಿಗಳು ಮತ್ತು ಸ್ವಾಮೀಜಿ ಮಧ್ಯೆ ಮಾತಿನ ಚಕಮಕಿ ಸಹ ನಡೆಯಿತು.
PublicNext
02/02/2022 01:31 pm