ಬೆಂಗಳೂರು: ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ಸಿ.ಎಂ ಇಬ್ರಾಹಿಂ ಈಗ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಪರಿಷತ್ ಸ್ಥಾನಕ್ಕೆ ಸದ್ಯದರಲ್ಲೇ ರಾಜೀನಾಮೆ ನೀಡುವುದಾಗಿ ಹೇಳಿರುವ ಅವರು ಸಿದ್ದರಾಮಯ್ಯ ವಿರುದ್ಧ ತಣ್ಣಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಇಬ್ರಾಹಿಂ, ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಲಕ್ಷಣ ಕಂಡಾಗ ಬಾದಾಮಿಯಿಂದ ನಾನೇ ನಾಮಪತ್ರ ಹಾಕಿಸಿದ್ದೆ. ಅದಕ್ಕಾಗಿ ಅಲ್ಲಿನ ಎಲ್ಲ ನಾಯಕರನ್ನು ಒಪ್ಪಿಸಿದ್ದೆ. ನಂತರ ಬಾದಾಮಿಯಲ್ಲಿ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾದರು. ಆದ್ರೆ ಅದೇ ಸಿದ್ದರಾಮಯ್ಯ ಇಂದು ನಮಗೆ ಹೊಸ ಗಿಫ್ಟ್ ಕೊಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಸದ್ಯಕ್ಕೆ ಎಲ್ಲವನ್ನೂ ಹೇಳಲಾಗೋದಿಲ್ಲ. ಎಲ್ಲವನ್ನೂ ಕಂತು ಕಂತಾಗಿ ಹೇಳುತ್ತೇನೆ ಎಂದ ಇಬ್ರಾಹಿಂ ಕುತೂಹಲ ಕಾದುಕೊಂಡಿದ್ದಾರೆ.
ಸದ್ಯ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದಾರೆ. ಸೋನಿಯಾ ನಮ್ಮ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರನಾಗಿದ್ದೇನೆ. ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್‌ಗೆ ಬಂದೆ. ಸಿದ್ದರಾಮಯ್ಯ ಸಲುವಾಗೆ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದ್ರು. ಆಗ ಕಾಂಗ್ರೆಸ್ ಪಕ್ಷ ಬಿಟ್ಟೆ, ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಅದೇ ರೀತಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದ
PublicNext
27/01/2022 05:31 pm