ಬಾಗಲಕೋಟೆ: ಏ ನಾಗರಾಜ್...ನಾನು ಗುಳೇದಗುಡ್ಡದಲ್ಲಿಯೇ ಇದ್ದೇನೆ. ಗುಳೇದಗುಡ್ಡ ಬ್ಯಾಕ್ ವರ್ಡ್ ಏರಿಯಾ. ಇದು ಅಭಿವೃದ್ಧಿ ಆಗಬೇಕು. ಹೀಗೆ ಫೋನ್ ನಲ್ಲಿಯೇ ಎಂಟಿಬಿ ನಾಗರಾಜ್ ಅವರಿಗೆ ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುಳೇದಗುಡ್ಡದ ಪುರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಜೆಇ,ಎಫ್.ಡಿ.ಸಿ. ಮತ್ತು ಎಸ್.ಡಿಸಿ ಹೀಗೆ ಇಲ್ಲಿ
ಈ ಕೂಡಲೇ ಈ ಹುದ್ದೆ ಭರ್ತಿ ಮಾಡಬೇಕಿದೆ. ಗುಳೇದಗುಡ್ಡ ಮೊದಲೇ ಬ್ಯಾಕ್ ವರ್ಡ್ ಏರಿಯಾ.ಇದು ಅಭಿವೃದ್ಧಿ ಆಗಬೇಕಿದೆ ಅಂತಲೇ ಸಿದ್ದರಾಮಯ್ಯ ವಿವರಿಸಿದ್ದಾರೆ.
ಸಚಿವ ಎಂಟಿಬಿಗೆ ಫೋನ್ ಮಾಡಿ ಈ ಎಲ್ಲ ವಿಷಯ ಹೇಳುವ ಮುಂಚೇ, ಸಿದ್ದರಾಮಯ್ಯನವ್ರು ಇಲಾಖೆ ಕಾರ್ಯದರ್ಶಿಗೆ ಫೋನ್ ಮಾಡಿದ್ದರು. ಏನು ನೀವೇ ಮಾಡ್ತೀರಾ ಇಲ್ಲವೇ ಎಂಟಿಬಿಗೆ ಹೇಳಬೇಕಾ ಅಂತಲೇ ಕೇಳಿಬಿಟ್ಟಿದ್ದರು.
PublicNext
24/01/2022 01:40 pm