ರಾಮನಗರ: ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಇಂದು ಮೂರನೇ ದಿನ. ಇಂದಿನ ಪಾದಯಾತ್ರೆಯಲ್ಲಿಯೂ ಮೈಸೂರಿನಿಂದ ಜನರ ದಂಡೇ ಹರಿದು ಬಂದಿದೆ.
ಇಂದು ಕೂಡಾ ಕಾರ್ಯಕರ್ತರೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕಾಂಗ್ರೆಸ್ ನಾಯಕರೊಂದಿಗೆ ಮೈಸೂರು ಭಾಗದ ಶಾಸಕರು , ಮುಖಂಡರು ಭಾಗಿಯಾದರು.
ಇಂದಿನ ಪಾದಯಾತ್ರೆಯಲ್ಲಿ 8-10 ಸಾವಿರ ಜನ ಪಾಲ್ಗೊಂಡಿದ್ದಾರೆ.
ಇನ್ನು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರಾದ ಎಚ್.ಎಂ. ರೇವಣ್ಣ ಮತ್ತು ಸಿ.ಎಂ. ಇಬ್ರಾಹಿಂ ಅವರಿಗೆ ಕೋವಿಡ್ ದೃಢಪಟ್ಟಿದೆ.
PublicNext
11/01/2022 06:03 pm