ಲಕ್ನೋ: ಪಂಚರಾಜ್ಯ ಚುನಾವಣೆ ಹಿನ್ನೆಲೆ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಡುಗಡೆಯಾಗಿವೆ. ಅದರಲ್ಲೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಮೇಲೆ ದೇಶದ ಚಿತ್ತ ನೆಟ್ಟಿದೆ. ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನಗಳಲ್ಲಿ ಪಕ್ಷ ಜಯಗಳಿಸಲಿದೆ.
ಜನವರಿ 10ರಂದು ಬಿಡುಗಡೆ ಮಾಡಿದ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇ 41.5ರಷ್ಟು ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ 33.3 ರಷ್ಟು ಮತ ಪಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಹೊರ ಬಂದ ಸಮೀಕ್ಷೆಯಲ್ಲಿ ಬಿಜೆಪಿ ಶೇ 40ರಷ್ಟು ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ 34ರಷ್ಟು ಮತ ಪಡೆಯಲಿದೆ ಎಂದು ವರದಿ ಬಂದಿತ್ತು. ರಾಜ್ಯದಲ್ಲಿ ಬಿಎಸ್‌ಪಿ ಶೇ 13, ಕಾಂಗ್ರೆಸ್ ಶೇ 7, ಇತರರು ಶೇ 7ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳಿತ್ತು.
ಪ್ರದೇಶವಾರು ಫಲಿತಾಂಶ ಸಾಧ್ಯತೆ:
ಪಶ್ಚಿಮ ಉತ್ತರ ಪ್ರದೇಶ
ಬಿಜೆಪಿ 73, ಎಸ್ಪಿ 55, ಬಿಎಸ್‌ಪಿ 5, ಕಾಂಗ್ರೆಸ್ 2, ಇತರೆ 1
ಅವಧ್ ಪ್ರಾಂತ್ಯ
ಬಿಜೆಪಿ 73, ಎಸ್ಪಿ 42, ಬಿಎಸ್‌ಪಿ 1, ಕಾಂಗ್ರೆಸ್ 1, ಇತರೆ 1
ಬುಂದೇಲ್ ಖಂಡ್
ಬಿಜೆಪಿ 15, ಎಸ್ಪಿ 4, ಬಿಎಸ್‌ಪಿ 0, ಕಾಂಗ್ರೆಸ್ 0, ಇತರೆ 0
ಪೂರ್ವಾಂಚಲ್
ಬಿಜೆಪಿ 68, ಎಸ್ಪಿ 50, ಬಿಎಸ್‌ಪಿ 6, ಕಾಂಗ್ರೆಸ್ 2, ಇತರೆ 4
PublicNext
11/01/2022 09:05 am