ರಾಮನಗರ: ರಾಜ್ಯದ ಮುಖ್ಯಮಂತ್ರಿ ಎದುರಿಗೇನೆ ಒಬ್ಬ ಸಚಿವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಡಿಕೆ ಸುರೇಶ್ ಅವರ ವರ್ತನೆಯನ್ನ ಬಿಜೆಪಿ ತೀವ್ರವಾಗಿಯೇ ಖಂಡಿಸಿದೆ. ಕಾಂಗ್ರೆಸ್ ಸಂಸ್ಕೃತಿ ಎಂದ್ರೆ ಗೂಂಡಾ ಸಂಸ್ಕೃತಿ ಎಂಬೋದಕ್ಕೆ ಇದು ಸೂಕ್ತ ಉದಾಹರಣೆ ಅಂತಲೂ ಟೀಕಿಸಿದೆ.
ಬಿಜೆಪಿ ಅಧಿಕೃತ ಟ್ವಿಟರ್ ಪೇಜ್ ನಲ್ಲಿಯೇ ಡಿಕೆ ಸುರೇಶ್ ವರ್ತನೆಯನ್ನ ಖಂಡಿಸಲಾಗಿದೆ. ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ. ಒಬ್ಬ ಸಂಸದರಿಗೆ ರಾಜ್ಯದ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂಬ ಪರಿಜ್ಞಾನವಿಲ್ಲದಿರುವುದು ವಿಪರ್ಯಾಸ.ಯಥಾ ರಾಜ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವರ್ತಿಸುತ್ತಿರುವುದು ಖಂಡನೀಯ ಎಂದು ವೀಡಿಯೋ ಸಮೇತ ಈ ಘಟನೆಯನ್ನ ಬಿಜೆಪಿ ವಿರೋಧಿಸಿದೆ.
PublicNext
03/01/2022 11:00 pm