ಲಖನೌ:ಮಥುರಾ ಮತ್ತು ವೃಂದಾವನದಲ್ಲೂ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಿರಂಗ ಸಭೆಯಲ್ಲಿಯೇ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.
ಅಯೋಧ್ಯಯಲ್ಲಿ ಈಗಾಗಲೇ ಮಂದಿರ ನಿರ್ಮಾಣ ಕಾರ್ಯ ಶುರು ಆಗಿದೆ. ಕಾಶಿಯ ವಿಶ್ವನಾಥನ ದೇವಸ್ಥಾನ ಹೇಗಿದೆ ಅಂತ ಗೊತ್ತಾಗಿದೆ. ಇನ್ನು ಮುಂದಿನ ಗುರು ಒಂದೇ.ಅದು ಮಥುರಾ ಮತ್ತು ವೃಂದ್ದಾವನದಲ್ಲಿ ದೇವಾಲಯ ನಿರ್ಮಿಸೋದೇ ಆಗಿದೆ ಎಂದೇ ಯೋಗಿ ಆದಿತ್ಯನಾಥ್ ವಿವರಿಸಿದ್ದಾರೆ.
ಅಮ್ರೋಹಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್,ಈಗಾಗಲೇ ಮಥುರಾದಲ್ಲಿ ಕೆಲಸ ಆರಂಭಗೊಂಡಿದೆ.ವೃಂದಾವನದಲ್ಲಿ ದೇವಸ್ಥಾನ ಮಾಡದೇ ಬಿಟ್ಟರೆ ಹೇಗ ಅಂತಲೇ ಪ್ರಶ್ನೆಸಿ, ತಮ್ಮ ಮುಂದಿನ ಈ ಪ್ಲಾನ್ ಅನ್ನ ಯೋಗಿ ಆದಿತ್ಯನಾಥ್ ಈಗ ಹೇಳಿಕೊಂಡಿದ್ದಾರೆ.
PublicNext
31/12/2021 07:33 am