ಗದಗ: ಗದಗ-ಬೇಟಗೇರಿ ನಗರಸಭೆ ಮತದಾನ ಪ್ರಕ್ರಿಯೆ ಜೋರಾಗಿಯೇ ನಡೆದಿದ್ದು, ಪಕ್ಷೇತರ ಅಭ್ಯರ್ಥಿಯೊಬ್ಬ
ಡೊಳ್ಳು ಮೇಳದೊಂದಿಗೆ ಮತಗಟ್ಟೆಗೆ ಆಗಮಿಸಿದ್ದಾರೆ.
ಗದಗ ನಗರದ ಖಾನ್ ತೋಟ ಬಡಾವಣೆಯಲ್ಲಿನ ಮತ ಗಟ್ಟೆಗೆ ಬೆಂಬಲಿಗರೊಂದಿಗೆ ಆಗಮಿಸಿದ ಅಭ್ಯರ್ಥಿ ಮುತ್ತು ಜಡಿಯನ್ನು ಮತಗಟ್ಟೆ ಆವರಣದಲ್ಲಿ ಬರದಂತೆ ಪೊಲೀಸರು ತಡೆದಿದ್ದಾರೆ.
ಅಲ್ಲದೇ ಅಭ್ಯರ್ಥಿಯನ್ನು ತಡೆದು ಸಿಬ್ಬಂದಿ ಮಾಸ್ಕ್ ಹಾಕಿಸಿ ಮತದಾನ ಮಾಡಲು ಅವಕಾಶ ಮಾಡಿದ್ದಾರೆ.
PublicNext
27/12/2021 09:42 am