ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆಯೇ ? ಇದ್ದರೂ ಏನ್ ಸರಿ ಇದೆ. ಸಿದ್ದರಾಮಯ್ಯನವ್ರು ಯಾಕೆ ನಾನು ಬರುವ ವರೆಗೂ ಮೈಸೂರು ಭಾಗದಲ್ಲಿ ಪಾದಯಾತ್ರೆ ಸಭೆ ಮಾಡಬೇಡ ಅಂತ ಹೇಳಿದ್ರು ? ಈ ಎಲ್ಲ ಪ್ರಶ್ನೆಗೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅದು ಕಾಂಗ್ರೆಸ್ ಹೈಕಮಾಂಡ್ ವರೆಗೂ ಹೋಗಿದೆ. ಬನ್ನಿ ಹೇಳ್ತೀವಿ.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರೆ ಸದ್ಯಕ್ಕೆ ಟಾಪ್.ಆದರೆ ಡಿಕೆಶಿ ನಡೆ ಯಾಕೋ ಸಿದ್ದರಾಮಾಯ್ಯನವರ ಆಪ್ತ ಶಾಸಕರಿಗೆ ರುಚಿಸುತ್ತಿಲ್ಲ. ಅದಕ್ಕೇನೆ ಮೊನ್ನೆ ಮೈಸೂರಿನಲ್ಲಿ ಡಿಕೆಶಿಗೆ ಸಿದ್ದರಾಮಯ್ಯನವರಿಲ್ಲದೇ ಸಭೆ ಬೇಡ ಅಂತಲೇ ಸಿದ್ದರಾಮಯ್ಯನವರಿಂದಲೇ ಡಿಕೆಶಿಗೆ ಹೇಳಿಸಿದ್ದರು.
ಆದರೆ ಈಗ ನೋಡಿದ್ರೆ ದೆಹಲಿ ಹೈಕಮಾಂಡ್ ಗೇನೆ ಸಿದ್ದರಾಮಯ್ಯ ಅವರ ಆಪ್ತ ಶಾಸಕರು, ಡಿಕೆಶಿಗೆ ವಿರುದ್ಧವೇ ದೂರು ನೀಡಿದ್ದಾರೆ. ಕಡಿವಾಣ ಹಾಕಲು ಕೂಡ ಮುಂದಾಗಿದ್ದಾರೆ. ಇದನ್ನ ನಾವು ಹೇಳ್ತಿಲ್ಲ. ಪಕ್ಷದ ಮೂಲಗಳೇ ಹೇಳ್ತಾಯಿವೆ. ಅಲ್ಲಿಗೆ ಸಿದ್ದರಾಮಯ್ಯನವರ ಆಪ್ತ ಶಾಸಕರಿಗೆ ಡಿಕೆಶಿ ಬೆಳೆಯೋದು ಇಷ್ಟ ಇಲ್ಲವೇ ಇಲ್ಲ ಅನ್ನೋದು ಈಗ ಸ್ಪಷ್ಟವಾಗುತ್ತಿದೆ.
PublicNext
27/12/2021 08:56 am