ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ಸರ್ಕಾರ ಜಾಹೀರಾತಿಗಾಗಿ ವರ್ಷಕ್ಕೆ 2 ಸಾವಿರ ಕೋಟಿ ಖರ್ಚು ಮಾಡಿದೆ: ಎಎಪಿ

ನವದೆಹಲಿ: ಉತ್ತರ ಪ್ರದೇಶದ ಯೋಗಿ ಸರ್ಕಾರ ಜಾಹೀರಾತಿಗಾಗಿಯೇ ವಾರ್ಷಿಕ 2 ಸಾವಿರ ಕೋಟಿ ಖರ್ಚು ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜಾಹೀರಾತುಗಳಿಗೆ ಅನವಶ್ಯಕವಾಗಿ ಕೋಟ್ಯಂತರ ವೆಚ್ಚ ಮಾಡುತ್ತಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಕೆಗೆ ಎಎಪಿ ತಿರುಗೇಟು ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಎಪಿ, ದೆಹಲಿ ಸರ್ಕಾರ ವಾರ್ಷಿಕವಾಗಿ ಜಾಹೀರಾತಿಗೆ 70 ಕೋಟಿ ರೂ. ಮಾತ್ರ ವೆಚ್ಚ ಮಾಡಿದೆ. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ವಾರ್ಷಿಕವಾಗಿ ಜಾಹೀರಾತಿಗೆ 2,000 ಕೋಟಿ ರೂ. ವಿನಿಯೋಗಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

Edited By : Nagaraj Tulugeri
PublicNext

PublicNext

26/12/2021 07:33 pm

Cinque Terre

103.09 K

Cinque Terre

12

ಸಂಬಂಧಿತ ಸುದ್ದಿ