ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಪಕ್ಷಗಳ ಗದ್ದಲದ ನಡುವೆ ಮತಾಂತರ ನಿಷೇಧ ವಿಧೇಯಕ ಮಂಡನೆ

ಬೆಳಗಾವಿ: ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ವಿಧೇಯಕವನ್ನು ಮಂಡಿಸಿದ್ದಾರೆ‌. ನಾಳೆ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡೋದಾಗಿ ಸ್ಪೀಕರ್ ಹೇಳಿದ್ದಾರೆ‌.

ಇನ್ನು ವಿಧೇಯಕ ಮಂಡನೆ ಆಗುತ್ತಿದ್ದಂತೆ ಸದನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಸದಸ್ಯರು ಕೋಲಾಹಲ ಎಬ್ಬಿಸಿದ್ದಾರೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ‌‌. ಸದನದಲ್ಲಿ ಈ ವಿಧೇಯಕ ಮಂಡನೆ ಬಗ್ಗೆ ನಮಗೆ ಮೊದಲೇ ಮಾಹಿತಿ ನೀಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಹಾಗೂ ವಿಧೇಯಕದ ಪ್ರತಿ ಹರಿದು ಹಾಕಿದ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದ್ದಾರೆ‌.

ಮತಾಂತರ ನಿಷೇಧ ಕಾಯ್ದೆ ರೂಪಿಸುವ ಉದ್ದೇಶದಿಂದ ಮಂಡಿನೆಯಾದ ಮಸೂದೆಯು ಜನ ಹಿತದೃಷ್ಟಿಯುಳ್ಳದ್ದಾಗಿದೆ. ಇದಕ್ಕೆ ವಿರೋಧಿಸಬೇಡಿ ಎಂದು ಸ್ಪೀಕರ್ ಕಾಗೇರಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

21/12/2021 04:12 pm

Cinque Terre

45.02 K

Cinque Terre

14

ಸಂಬಂಧಿತ ಸುದ್ದಿ