ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಇಎಸ್ ನಿಷೇಧಿಸಿ ಇಲ್ಲವೇ ಕರ್ನಾಟಕ ಬಂದ್ ಎದುರಿಸಿ-ವಾಟಾಳ್‌ ನಾಗರಾಜ್

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ನಿಷೇಧ ಮಾಡುವ ನಿರ್ಧಾರವನ್ನ ಸರ್ಕಾರ ಪ್ರಕಟಿಸದೇ ಇದ್ದರೇ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಈಗ ಎಚ್ಚರಿಕೆ ನೀಡಿವೆ.

ಎಂಇಎಸ್‌ಪುಂಡಾಟಿಕೆ ಹಾಗೂ ಕನ್ನಡ ಧ್ವಜ ಸುಟ್ಟು ಹಾಕಿರೋ ಶಿವಸೇನೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಇದೇ ಸಂದರ್ಭದಲ್ಲಿಯೆ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕಿಡಿ ಕಾರಿವೆ.ಇವುಗಳನ್ನ ನಿಷೇಧಿಸಬೇಕು ಅಂತಲೂ ಹೇಳಿವೆ.

ಇದೇ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದ ವಾಟಾಳ್ ನಾಗಾರಾಜ್ ಎಂಇಎಸ್ ಹಾಗೂ ಶಿವಸೇನೆ ನಿಷೇಧಿಸದೇ ಇದ್ದರೆ ಕರ್ನಾಟಕ ಬಂದ್ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

Edited By :
PublicNext

PublicNext

21/12/2021 09:01 am

Cinque Terre

28.97 K

Cinque Terre

2

ಸಂಬಂಧಿತ ಸುದ್ದಿ