ಗದಗ:ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಚರ್ಚೆ ಆಗಲೇಬಾರದು.ಅದಕ್ಕೇನೆ ಎಂಇಎಸ್ ಪುಂಡಾಟಿಕೆ ಮೂಲಕವೇ ಅದನ್ನ ತಡೆಯುವ ಹುನ್ನಾರ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಹಿನ್ನೆಲೆಯಲ್ಲಿಯೇ ಉದ್ದವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಯಾಗಿಯೇ ಸಿ.ಸಿ.ಪಾಟೀಲ್ ಇವತ್ತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಉದ್ಧವ್ ಠಾಕ್ರೆ ಒಬ್ಬ ಉದ್ಭವ ಠಾಕ್ರೆನೇ ಸರಿ.ಟ್ವೀಟ್ ಮಾಡುವ ಮೂಲಕ ಉದ್ಧಟತನ ಮೆರೆದಿದ್ದಾರೆ.ಬೆಳಗಾವಿ ಅಭಿವೃದ್ಧಿ ಆಗೋದು ಬೇಡವಾಗಿದೆ. ಅದಕ್ಕೇನೆ ಎಂಇಎಸ್ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಈ ಪುಂಡರಿಗೆ ಉದ್ಧವ್ ಠಾಕ್ರೆ ಬೆಂಬಲ ಇದೆ ಅಂತಲೂ ದೂರಿದ್ದಾರೆ ಸಿ.ಸಿ.ಪಾಟೀಲ್.
PublicNext
19/12/2021 04:12 pm