ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಣ್ಣ ಪ್ರತಿಮೆ ಮರು ಸ್ಥಾಪನೆ ಮೂಲಕ ಎಂಇಎಸ್‌ಪುಂಡರಿಗೆ ಎಚ್ಚರಿಕೆ

ಬೆಳಗಾವಿ: ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ಎಂಇಎಸ್ ಪುಂಡರು ಭಗ್ನಗೊಳಿಸಿದ್ದರು. ಆದರೆ ಇಂದು ಬೆಳಗಾವಿ ಕನ್ನಡಿಗರು ವೀರ ರಾಯಣ್ಣನ ಪ್ರತಿಮೆಯನ್ನ ಮರು ಪ್ರತಿಷ್ಠಾಪಿಸಿ ಅಭಿಮಾನ ಮತ್ತು ದೇಶ ಭಕ್ತಿ ಮೆರೆದಿದ್ದಾರೆ.

ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಾಯಣ್ಣನ ಪುತ್ಥಳಿಯನ್ನ ಎಂಇಎಸ್ ಪುಂಡರು 17 ರ ರಾತ್ರಿ ಭಗ್ನಗೊಳಿಸಿದ್ದರು. ಆದರೆ ಅದೇ ಜಾಗದಲ್ಲಿಯೆ ಇಂದು ಕಾಲೋನಿಯ ಮುಖಂಡರು ಅಷ್ಟೇ ಅದ್ದೂರಿಯಾಗಿಯೇ ಕುಂಬ ಮೇಳದ ಮುಖಾಂತರ ರಾಯಣ್ಣ ಪ್ರತಿಮೆಯನ್ನ ಮರು ಸ್ಥಾಪಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕ್ಷೀರಾಭಿಷೇಕ-ಜಲಾಭಿಷೇಕ ಮಾಡುವ ಮೂಲಕ ಅಭಿಮಾನವನ್ನ ಮರೆದಿದ್ದಾರೆ. ಈ ಒಂದು ಸಂಭ್ರಮದಲ್ಲಿ ಇಡೀ ಕಾಲೋನಿಯ ಜನರ ಕೂಡ ಭಾಗಿ ಆಗಿದ್ದರು. ಮಹಿಳೆಯರಾದಿಯಾಗಿ ಎಲ್ಲರೂ ಇಲ್ಲಿ ಭಾಗಿಯಾಗಿ ಸಂಭ್ರಮ ಪಟ್ಟರು. ಈ ಮೂಲಕ ಎಂಇಎಸ್ ಪುಂಡರಿಗೂ ಎಚ್ಚರಿಕೆ ಸಂದೇಶ ರವಾನಿಸಿದರು.

Edited By : Nagesh Gaonkar
PublicNext

PublicNext

19/12/2021 03:54 pm

Cinque Terre

59.67 K

Cinque Terre

7

ಸಂಬಂಧಿತ ಸುದ್ದಿ