ಗದಗ: ಎಮ್ ಇ ಎಸ್ ಎಲ್ಲಿದೆ. ಶಕ್ತಿ ಇರುವವರನ್ನು ಬ್ಯಾನ್ ಮಾಡಬಹುದು. ಅಸ್ಥಿತ್ವ ಇಲ್ಲದ ಎಮ್ ಇ ಎಸ್ ಗೆ ಯಾಕೆ ಬೆಂಬಲ. ಇಂಪಾರ್ಟೆನ್ಸ್ ಕೊಡುವ ಅವಶ್ಯಕತೆ ಇಲ್ಲ ಎಂದು ಗದಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಎಂಇಎಸ್ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅವರನ್ನು ಈಗಾಗಲೆ ಒದ್ದು ಒಳಗಡೆ ಹಾಕಲಾಗಿದೆ. ಮತ್ತೆ ಮುಂದುವರೆದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಮ್ ಇ ಎಸ್ ವಿಚಾರಕ್ಕೆ ಡಿಕೆಶಿ ಸಾಫ್ಟ್ ಕಾರ್ನರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಮಾತನಾಡುವಾಗ ಮೈಮೇಲೆ ಜ್ಞಾನ ಇರಬೇಕು. ಯಾರು ಗೂಂಡಾಗಿರಿ ಮಾಡ್ತಾರೋ ಅವರು ಡಿಕೆಶಿ ಸ್ನೇಹಿತರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ಅಟ್ಯಾಕ್ ಮಾಡಿದವರ ಬಂಧನ ಮಾಡಲಾಗಿದೆ.ಧ್ವಜ ಸುಟ್ಟವರ ವಿರುದ್ಧ ಕ್ರಮಕ್ಕೆ ಮಹರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಆ್ಯಕ್ಷನ್ ತೆಗೆದುಕೊಳ್ಳಲು ಹೇಳಿದ್ದೇವೆ. ನಮ್ಮ ನೆಲ, ಜಲ, ಭಾಷೆ ವಿಚಾರವಾಗಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಮತಾಂತರ ವಿಚಾರವಾಗಿ ಮಾತನಾಡಿದ ಅವರು, ಸ್ವಂತ ಅಕ್ಕಾನೋ ತಂಗಿನೋ ಮತಾಂತರವಾದಾಗ ವಿರೋಧಿಸುವವರಿಗೆ ಅರ್ಥ ಆಗುತ್ತದೆ. ಬುರ್ಖಾ ಹಾಕಿಸಿ ವಿದೇಶದಲ್ಲಿ ಹೋಗಿ ಮಾರುತ್ತಾರಲ್ಲ ಆಗ ಗೊತ್ತಾಗುತ್ತದೆ. ನಮ್ಮ ಸ್ವಂತ ಅಕ್ಕ ತಂಗಿಯರಿಗೆ. ಹಿಂದೂ ಸಮಾಜಕ್ಕೆ ತೊಂದರೆಯಾಗಬಾರದೆಂದು ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲಿದೆ. ಹಿಂದೂ ಸಮಾಜ ಬೆಂಬಲಿಸುತ್ತಿದೆ. ಆದ್ರೆ ಬೇರೆಯವರು ಮಾತ್ರ ವಿರೋಧಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆ ವಾಪಾಸ್ ಎಂಬ ಸಿದ್ಧರಾಮಯ್ಯನವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರ ಸರ್ಕಾರ ಬರುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮಾತೇ ಇಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕಾಯ್ದೆ ವಿರೋಧಿಸಿದ್ದಾರೆ ಆದರೆ ಮಾದಾರ ಚನ್ನಯ್ಯ ಸ್ವಾಮಿಗಳೇ ಸ್ವಾಗತಿಸಿದ್ದಾರೆ.
PublicNext
19/12/2021 08:07 am