ಚಿಕ್ಕಮಗಳೂರು : ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದ್ರೆ ಅಂಬೇಡ್ಕರ್ ಗೆ ಜಾಗ ಇರುವುದಿಲ್ಲ, ಕ್ರೈಸ್ತ ಧರ್ಮಕ್ಕೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯನವರಿಗೆ ಜಾಗ ಇರುವುದಿಲ್ಲ. ಹಿಂದೂಗಳು ಬೌದ್ಧರು, ವೈಷ್ಣವರಾದ್ರೆ ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತೆ, ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ.
ಇಸ್ಲಾಮಿಗೆ ಪರಿವರ್ತನೆಯಾದ್ರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿಲ್ಲ ಎಂದು ನಗರದಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಮತಾಂತರ ಮತಗಳ ಗಳಿಕೆಗೆ ಇರೋ ಸಾಧನ ಅಲ್ಲ,ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ರು,
ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದೂತ್ವ ಅಲ್ಲ, ಗಾಂಧೀ ಹಿಂದುತ್ವ ಅಂತಾರೆ .ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ರು ಅಂತ ಕಾಂಗ್ರೆಸ್ ಇತಿಹಾಸ ಓದಲಿ ಸಿದ್ದರಾಮಯ್ಯನವರೇ ನೀವು ಒಮ್ಮೆ ಕೂಡ ಒಮ್ಮೆ ಇತಿಹಾಸ ಓದಿ ಎಂದು ಮತಾಂತರ ನಿಷೇಧ ಕಾಯಿದೆಗೆ ಕಾಂಗ್ರೆಸ್ ನಡೆ ವಿರೋಧಿಸಿ ಸಿ.ಟಿ ರವಿ ಮಾತಿನಿಂದ ತಿವಿದಿದ್ದಾರೆ.
PublicNext
17/12/2021 12:42 pm