ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಹವಾ ಧೂಳೀಪಟ : ಅಭಿವೃದ್ಧಿಗೆ ಜೈ ಎಂದ ಜನ,ಭೀಮರಾವ್ ಪಾಟೀಲ

ಹುಮನಾಬಾದ: ಇಂದು ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿದ್ದಾರೆ. ಇದರ ಮಧ್ಯೆ ಗೆದ್ದು ಬೀಗಿದ ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಮೋದಿಯವರನ್ನು ಕಾಲು ಎಳೆದಿದ್ದಾರೆ. ಮೋದಿ ಹವಾ ಇಲ್ಲ ಸರ್ಕಾರದ ಆಟ ನಡೆದಿಲ್ಲ ಮತದಾರ ಪ್ರಭುಗಳು ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಹೇಳಿದ್ದಾರೆ.

ಮಂಗಳವಾರ ನಡೆದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ ಜಿಲ್ಲೆಯಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರ ಆಟ ಇಲ್ಲಿ ನಡೆದಿಲ್ಲ. ಹಣಬಲ ಕೆಲಸ ಮಾಡಿಲ್ಲ. ಮತದಾರರಿಗೆ ಸೀರೆ, ಹಣ, ನಗದು ಹಂಚಿರುವುದು ಎಲ್ಲರಿಗೂ ತಿಳಿದ ವಿಷಯ. ಇದಾಗ್ಯೂ ಮತದಾರ ಪ್ರಭುಗಳು ನಮ್ಮ ಕೈ ಹಿಡಿದಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ಧಾರೆ.

Edited By : Nirmala Aralikatti
PublicNext

PublicNext

14/12/2021 01:28 pm

Cinque Terre

96.2 K

Cinque Terre

48

ಸಂಬಂಧಿತ ಸುದ್ದಿ