ವಿಜಯಪುರ:ಬಾಗಲಕೋಟೆ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಯ ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಮುನ್ನಡೆ ಸಾಧಿಸಿದ್ದಾರೆ. ಪಾಟೀಲ್ ಗೆ 3332 ಮತಗಳು, ಬಿಜೆಪಿಯ ಪಿ ಹೆಚ್ ಪೂಜಾರ್ ಗೆ 2222 ಮತಗಳು ಹಾಗೂ ಪಕ್ಷೇತರ ಮಲ್ಲಿಕಾರ್ಜುನ ಲೋಣಿಗೆ 1459 ಮತಗಳು ದೊರೆತಿವೆ. ಮತ ಎಣಿಕೆ ಕಾರ್ಯ ಇನ್ನೂ ಕೂಡ ಮುಂದುವರಿದಿದೆ.
ಆದರೆ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಬಹುತೇಕ ಗೆಲುವು ಹಿನ್ನಲೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಬೆಂಬಲಿಗರು ಪಟಾಕಿ ಹಾರಿಸಿ ವಿಜಯೋತ್ಸವ ಆಚರಿಸಿದ್ದಾರೆ.
PublicNext
14/12/2021 12:47 pm