ಭಾರತದ ಸೇನಾಧಿಕಾರಿ ಬಿಪಿನ್ ರಾವತ್ ಸಾವು ಇಡೀ ದೇಶವನ್ನೇ ದುಃಖದಲ್ಲಿಯೇ ದೂಡಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿನೂ ದುಃಖಪಡುತ್ತಿದ್ದಾನೆ. ಆದರೆ ಕಾಂಗ್ರೆಸ್‌ನ್ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೇ ಏನ್ ಆಗಿದೆ. ಕಾರ್ಯಕ್ರಮದವೊಂದರಲ್ಲಿ ನಗು-ನಗುತ್ತಾ ನೃತ್ಯ ಮಾಡಿ ನೆಟ್ಟಿಗರ ಕೆಂಗಣ್ಣಿಗೂ ಗುರಿ ಆಗಿದ್ದಾರೆ. ಅಷ್ಟೇ ಯಾಕೆ ಬಿಜೆಪಿನೂ ಪ್ರಿಯಾಂಕಾ ವಿರುದ್ಧ ಕೆಂಡ ಕಾರುತ್ತಿದೆ.
ಪಕ್ಷ ಯಾವುದಾದರೇನೂ..? ದೇಶ ಯಾವುದಾದರೇನು ? ವೀರ ಯೋಧರು ಅಂದ್ರೆ ಅವರು ಎಲ್ಲಿರಿಗೂ ಒಂದೇ. ಹೀಗಿರೋವಾಗ ಭಾರತ ದೇಶದ ಸೇನಾಧಿಕಾರಿ ಬಿಪಿನ್ ರಾವತ್ ಸೇರಿದಂತೆ 13 ಜನ ಮೃತಪಟ್ಟಿದ್ದಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಪ್ರಿಯಾಂಕಾ ಗಾಂಧಿ ಡ್ಯಾನ್ಸ್ ಮಾಡಿ ಖುಷಿಪಡುತ್ತಿದ್ದಾರೆ.
ಪ್ರಚಾರದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಸಾಂಪ್ರದಾಯಿಕ ಉಡುಗೆಯನ್ನ ಧರಿಸಿಕೊಂಡು ಜಾನಪದ ಶೈಲಿಯ ನೃತ್ಯದಲ್ಲಿಯೂ ಮಾಡಿದ್ದಾರೆ. ಇದೇ ವೀಡಿಯೋವನ್ನ ಈಗ ಪ್ರೀತಿ ಗಾಂಧಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇವರ ಪ್ರೋಫೈಲ್ ಗೆ ಹೋದ್ರೆ ಅಲ್ಲಿ ಮೋದಿ ಅವರ ಜೊತೆಗೆ ತೆಗೆಸಿಕೊಂಡ ಫೋಟೋಗಳೂ ಸಿಗುತ್ತವೆ. ಅಲ್ಲಿಗೆ ಪ್ರಿಯಾಂಕಾ ನಡೆಯನ್ನ ಟೀಕಿಸಿದವ್ರು ಬಿಜೆಪಿ ಫಾಲೋವರ್ ಅಂತಲೇ ಸ್ಪಷ್ಟವಾಗುತ್ತದೆ.ಅಲ್ಲಿಗೆ ಇದು ಬಿಜೆಪಿ ನಿಲುವು ಅಂತಲೂ ನಾವು ಭಾವಿಸಬಹುದೇನೋ.
PublicNext
10/12/2021 05:40 pm