ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ವಿಧಾನ ಪರಿಷತ್‌ ಚುನಾವಣೆಗೆ ಮತದಾನ: ಕಣದಲ್ಲಿ 90 ಅಭ್ಯರ್ಥಿಗಳು

ಬೆಂಗಳೂರು: ಇಪ್ಪತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್‌ 14ರಂದು ಫಲಿತಾಂಶ ಹೊರ ಬರಲಿದೆ.

ನವೆಂಬರ್‌ 16ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಪೈಪೋಟಿಯಲ್ಲಿವೆ. ಜೆಡಿಎಸ್‌ ಆರು ಕ್ಷೇತ್ರಗಳಲ್ಲಿ ಹಾಗೂ 33 ಪಕ್ಷೇತರರು ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಒಬ್ಬ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ.

ರಾಜ್ಯದಲ್ಲಿ 6,072 ಮತಗಟ್ಟೆಗಳಿದ್ದು, 23,065 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು 99,062 ಮತದಾರರಿದ್ದು, ಈ ಪೈಕಿ 47,205 ಪುರುಷರು, 51854 ಮಹಿಳೆಯರು ಮತ್ತು ಮೂವರು ಇತರರು ಇದ್ದಾರೆ. 7073 ಮತಗಟ್ಟೆ ರಿಟನ್ಸ್‌ರ್‍ ಅಧಿಕಾರಿಗಳು, 9344 ಮತಗಟ್ಟೆಅಧಿಕಾರಿಗಳು ಮತ್ತು 6648 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಡಿ.14ರಂದು ಮತ ಎಣಿಕೆ ನಡೆಯಲಿದ್ದು, 20 ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈಗಾಗಲೇ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ತಮ್ಮ ಕಾರ್ಯ ಮತಗಟ್ಟೆಗಳಿಗೆ ತೆರಳಿ ತಯಾರಿ ಕೈಗೊಂಡಿದ್ದಾರೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆಯೋಗವು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸ್ ಬಳಕೆ ಮಾಡುವುದು ಮತ್ತು ಮತದಾನ ವೇಳೆ ಅಂತರ ಕಾಯ್ದುಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ.

Edited By : Vijay Kumar
PublicNext

PublicNext

10/12/2021 08:57 am

Cinque Terre

45.88 K

Cinque Terre

2

ಸಂಬಂಧಿತ ಸುದ್ದಿ