ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯನವ್ರಿಗೆ ಮುಸಲ್ಮಾನರೇ ಗತಿ. ಮುಂದಿನ ಸಲ ಇವರು ಬಾದಾಮಿಯಿಂದ ಸ್ಪರ್ಧಿಸೋದಿಲ್ಲ. ಜಮೀರ್ ಅಹ್ಮದ್ ಕಾಲು ಹಿಡಿದು ಚಾಮರಾಜಪೇಟೆಯಲ್ಲಿಯೇ ಸ್ಪರ್ಧಿಸಬೇಕು ಅಂತಲೇ ಸಚಿವ ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡುವಾಗಲೇ ಸಿದ್ದರಾಮಯ್ಯನವರ ಹೇಳಿಕೆಗೆ ಸಂಬಂಧಿಸಿದಂತೆ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದೇ ಒಂದು ಮನೆನೂ ಹಂಚಿಕೆ ಆಗಿಲ್ಲ ಅಂತ ಸಿದ್ಧರಾಮಯ್ಯ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮನೆ ಹಂಚಿಕೆ ಆಗುತ್ತವೇಯೇ ? ವಸತಿ ಇಲಾಖೆ ಆ ಕೆಲಸ ಮಾಡುತ್ತದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರು ತಿಳಿದುಕೊಂಡೇ ಮಾತನಾಡಬೇಕು.ಏನೇನೋ ಹೇಳೋದಲ್ಲ ಅಂತಲೇ ಟೀಕಿಸಿದ್ದಾರೆ.
PublicNext
06/12/2021 01:10 pm