ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗೆಪಾಟಲಿಗೀಡಾದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಚರ್ಚೆಯೊಂದರಲ್ಲಿ ಹೇಳಿಕೆವೊಂದನ್ನು ನೀಡಿ ನಗೆಪಾಟಲಿಗೀಡಾಗಿದ್ದಾರೆ. ಈ ಹಿಂದೆ ಹಲವಾರು ಬಾರಿ ಇವರು ನಗೆಪಾಟಲಿಗೀಡಾಗಿದ್ದ ಪ್ರಸಂಗಗಳು ನಡೆದಿವೆ.

ಹೌದು ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಬಿತ್ ಪಾತ್ರ ತಮ್ಮ ಶೈಕ್ಷಣಿಕ ಹಿನ್ನೆಲೆ ಕುರಿತು ಮಾತನಾಡುವಾಗ "ನಾನು ಎಂಬಿಬಿಎಸ್, ಎಂಎಸ್ ಮಾಡಿದ್ದೇನೆ. ಎಮ್ ಆರ್ ಸಿಎಸ್ ಅನ್ನು ಲಂಡನ್ ನಿಂದ ಪೂರೈಸಿದ್ದೇನೆ. 2000 ಇಸವಿಯಲ್ಲಿ ನಡೆದ ಯುಪಿಎಸ್ ಸಿ ಪರೀಕ್ಷೆಯಲ್ಲಿ 19 ನೇ ರ‍್ಯಾಂಕ್‌ ಪಡೆದಿದ್ದೆ" ಎಂದು ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ಮುಖಂಡ ಆದಿತ್ಯ ಗೋಸ್ವಾಮಿ ಸಂಬಿತ್ ಪಾತ್ರ ವೀಡಿಯೋವನ್ನು ಶೇರ್ ಮಾಡಿದ್ದು, ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಸಂಬಿತ್ ಪಾತ್ರ, "ಸಿಎಸ್ ಇ ಮಾತ್ರವಲ್ಲದೇ ಮೆಡಿಕಲ್ ಕ್ಷೇತ್ರದಲ್ಲೂ ಯುಪಿಎಸ್ ಸಿ ಪರೀಕ್ಷೆ ಆಯೋಜಿಸಲಾಗುತ್ತದೆ. ಸ್ವಯಂಘೋಷಿತ ಸುಶಿಕ್ಷಿತರು ಇದನ್ನು ಅರಿತಿರಬೇಕು" ಎಂದಿದ್ದಾರೆ. ಆದರೆ ಯುಪಿಎಸ್ ಸಿ ಮೆಡಿಕಲ್ ಗೆ ಸಂಬಂಧಿಸಿದ ಯಾವುದೇ ಮಾಹಿತಿಗಳು, ಡಾಟಾಗಳು ಇಂಟರ್ ನಟ್ ನಲ್ಲಿ ಲಭ್ಯವಿಲ್ಲ ಎಂದು ಆದಿತ್ಯ ಗೋಸ್ವಾಮಿ ಹೇಳಿದ್ದಾರೆ.

Edited By : Nirmala Aralikatti
PublicNext

PublicNext

06/12/2021 07:37 am

Cinque Terre

65.14 K

Cinque Terre

30

ಸಂಬಂಧಿತ ಸುದ್ದಿ