ಮಣಿಪಾಲ: ದಾಳಿಗೀಡಾಗಿ ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿಯಲ್ಲಿ ದಾಖಲಾಗಿರುವ ಗೋರಕ್ಷಕರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ " ಬಿಜೆಪಿ ಸರಕಾರ ಬಂದರೂ ನಿಲ್ಲದ ಗೋ ಸಾಗಾಟ- ಗೋ ಹತ್ಯೆ ಬಗ್ಗೆ ನನಗೆ ಅಸಮಾಧಾನ ಇದೆ.
ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆಯೂ ಅಸಮಾಧಾನ ಇದೆ" ಎಂದಿದ್ದಾರೆ.
"ಬಿಜೆಪಿ ಸರ್ಕಾರ ಬಂದರೂ ಗೋಹತ್ಯೆ ನಿಂತಿಲ್ಲ! ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತಿದೆ.
ಪೂರ್ಣ ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಗೋಹತ್ಯೆ ಮಾಡುವವರಿಗೆ ಬಲೆ ಹಾಕುತ್ತೇವೆ.
ನಾನು ಹಿಂದೊಂದು, ಮುಂದೊಂದು ಇಲ್ಲ. ಗೃಹ ಸಚಿವರ ಜೊತೆ ಚರ್ಚಿಸಿ ಎಲ್ಲ ಕ್ರಮ ಕೈಗೊಳ್ಳುತ್ತೇವೆ" ಎಂದು ಆಕ್ರೋಶ ಹೊರ ಹಾಕಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನಾನು ಸಿಎಂ ಆಗಲ್ಲ.
ಸಂಘಟನೆ ನನ್ನನ್ನು ಡಿಸಿಎಂ ಮಾಡಿತ್ತು. ಸಂಘಟನೆ ನನ್ನನ್ನು ಏನು ಮಾಡುತ್ತೋ ಅದು ಆಗುತ್ತೇನೆ.
ಬಾಗಲಕೋಟೆಯಲ್ಲಿ ನಿರಾಣಿ ಬಗ್ಗೆ ಮಾತನಾಡಿದ್ದು ನಿಜ. ನಿರಾಣಿ ಸಣ್ಣ ಉದ್ದಿಮೆ ಆರಂಭಿಸಿ ದೊಡ್ಡ ಉದ್ಯಮಿಯಾದವರು. ಮುಂದೆ ಅವಕಾಶ ಸಿಕ್ಕರೆ ಸಿಎಂ ಆಗಬಹುದು ಎಂದಿದ್ದೆ. ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತದೆ ಎಂದು ನಾನು ಹೇಳಿಲ್ಲ. ಪತ್ರಕರ್ತರಿಗೆ ಬೇರೆ ಉದ್ಯೋಗ ಇಲ್ಲ, ಮ್ಮಾಯಿಯನ್ನು ಬದಲಾವಣೆ ಮಾಡುತ್ತಾರೆ ಎಂದು ನಾನು ಹೇಳಿಲ್ಲ. ಹಾಗೆ ಬರೀಬೇಡ್ರಪ್ಪ ಎಂದು ಹೇಳಿದ್ದೆ" ಎಂದರು.
PublicNext
01/12/2021 09:27 pm