ಮುಂಬೈ:ಕೇಂದ್ರ ಸರ್ಕಾರದ ತಲೆ ನೆಟ್ಟಗಿಲ್ಲ. ಏನೇನೋ ಹೇಳುತ್ತಿದೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಸರ್ಕಾರ ಕಾನೂನು ತರಲೇಬೇಕು. ಇಲ್ಲದೇ ಇದ್ದರೇ ಬಿಡೋದೇ ಇಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯಿತ್ ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಮುಂಬೈನ ಅಜಾದ್ ಮೈದಾನದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ನಲ್ಲಿ ಭಾಗವಹಿಸಿ ಮಾತನಾಡಿದ್ದಾರೆ ರಾಕೇಶ್ ಟಿಕಾಯಿತ್.
ಕೇಂದ್ರ ಸರ್ಕಾರ MSP ಮೇಲೆ ಕಾನೂನು ತರಲೇಬೇಕು. ಇಲ್ಲದೇ ಇದ್ದರೆ ಸರಿ ಇರೋದಿಲ್ಲ. ಜನವರಿ-26 ಕೂಡ ದೂರ ಇಲ್ಲ. ನಾಲ್ಕು ಲಕ್ಷ ರೈತರ ಟ್ರ್ಯಾಕ್ಟರ್ ಗಳೂ ಇಲ್ಲೆ ಇವೆ. ಎಲ್ಲವನ್ನೂ ಅಲ್ಲಿಗೆ ತಂದು ಬಿಡುತ್ತವೇ ಅಂತಲೇ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯಿತ್ ಆವಾಜ್ ಹಾಕಿದ್ದಾರೆ.
PublicNext
28/11/2021 07:01 pm