ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಥೂ ಅಂತಾರಲ್ಲ, ನಾನೇನು ಮಾಡಿದ್ದೇನೆ?': ಹೆಬ್ಬಾಳ್ಕರ್ ಕಿಡಿ

ಬೆಳಗಾವಿ: ಲಕ್ಷ್ಮಿ ಸೋಲಿಸಬೇಕು ಎನ್ನುವುದೇ ಗುರಿಯಂತೆ. ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಬಹುದು; ನಾನು ನನ್ನ ಪಕ್ಷದಲ್ಲೂ ಬೆಳೆಯಬಾರದಾ? ಲಿಂಗಾಯತ ಸಮಾಜದ ಹೆಣ್ಣು ಮಗಳು ನಾನು. ಥೂ ಅಂತಾರಲ್ಲ, ನಾನೇನು ಮಾಡಿದ್ದೇನೆ?! ಬಸವಣ್ಣನ ತತ್ವದ ಮೇಲೆ ಜೀವನ ನಡೆಸುತ್ತಿರುವ ಹೆಣ್ಣು ಮಗಳೊಬ್ಬಳ ಬಗ್ಗೆ ಮಾತನಾಡಿ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.

ಬೈಲಹೊಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಪಕ್ಷದ ವರಿಷ್ಠರು ಆಶೀರ್ವಾದ ಮಾಡಿದ್ದರಿಂದ ತಮ್ಮ ಚನ್ನರಾಜ ಹಟ್ಟಿಹೊಳಿ ವಿಧಾನಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾನೆ. ಬಿಜೆಪಿಯವರೂ ಅಭ್ಯರ್ಥಿ ಹಾಕಿದ್ದಾರೆ. ಹೀಗಿರುವಾಗ 3ನೇಯವರಿಗೆ ಏನು ಕೆಲಸ? ಹೋದ ಬಾರಿ ನಮ್ಮ ಪಕ್ಷದಲ್ಲೇ ಇದ್ದು ನಮ್ಮವರನ್ನೇ ಸೋಲಿಸಿ ಅನ್ಯಾಯ ಮಾಡಿದರು. ಈ ಬಾರಿ ಬಿಜೆಪಿಗೆ ಹೋಗಿ ಅವರಿಗೂ ಅನ್ಯಾಯ ಮಾಡುತ್ತಿದ್ದಾರೆ' ಎಂದು ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

Edited By : Vijay Kumar
PublicNext

PublicNext

27/11/2021 05:08 pm

Cinque Terre

49.31 K

Cinque Terre

7

ಸಂಬಂಧಿತ ಸುದ್ದಿ