ಬಾಗಲಕೋಟೆ: ಮಂಗಳೂರಿನಲ್ಲಿ ಕುಷ್ಟ ರೋಗ ನಿಯಂತ್ರಣಾಧಿಕಾರಿಯಿಂದ ಕಚೇರಿಯಲ್ಲಿ ಕಾಮಕೇಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಅಸಭ್ಯ ವರ್ತನೆಗಳನ್ನು ನಮ್ಮ ಸರ್ಕಾರದಲ್ಲಿ ಸಹಿಸೋದಿಲ್ಲ ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ನಿರ್ದಿಷ್ಟವಾದ ಕಾನೂನು ಕ್ರಮವನ್ನು ಸರ್ಕಾರ ಕೈಗೊಳ್ಳುತ್ತೆ ಎಂದಿದ್ದಾರೆ. ಇನ್ನು 40 ಪರ್ಸೆಂಟ್ ಸರ್ಕಾರ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪಾರದರ್ಶಕ ವ್ಯವಸ್ಥೆ ಅಡಿಯಲ್ಲಿ ನಮ್ಮ ಸರಕಾರ ನಡೆಯುತ್ತಿದೆ. ಯಾವುದೇ ದೂರು ಬಂದಾಗ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುತ್ತದೆ. ಮುಖ್ಯಮಂತ್ರಿ ಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಆರೋಪ ಮಾಡುವವರು ಮೊದಲು ದಾಖಲೆಗಳನ್ನ ಕೊಡಬೇಕು. ಸುಳ್ಳು ಸುದ್ದಿಗಳನ್ನು ಬೇಕಾದಷ್ಟು ಹೇಳಬಹುದು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸರ್ಕಾರದ ಮೇಲೆ ಇದೇ ರೀತಿ ಆರೋಪ ಬಂದಿತ್ತು. ಆಗ ಎಲ್ಲಿ ಕ್ರಮ ಕೈಗೊಂಡರು? ಎಲ್ಲಿ ತನಿಖೆ ಆಗಿದೆ? ಎಂದು ಕಟೀಲ್ ಪ್ರಶ್ನಿಸಿದ್ದಾರೆ.
PublicNext
27/11/2021 04:59 pm