ಬೆಂಗಳೂರು:ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಮೋ ಅಥವಾ ಸಿ ಟೀಮೋ ಅಂಥ ಪ್ರಶ್ನೆ ಪ್ರಶ್ನೆ ಮಾಡಿ ಕಾಂಗ್ರೆಸ್ ಪಕ್ಷ ಜೆಡಿಎಸ್ ವಿರುದ್ಧ ಕೊಟ್ಟ ಟಾಂಗ್ ಗೆ ಕುಮಾರ್ ಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ ಬಳಿಕ ಕುಮಾರ್ ಸ್ವಾಮಿ ಮಾತನಾಡಿ,
ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಅಂತಲೇ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಜೆಡಿಎಸ್ ವಿರುದ್ಧ ಟೀಕೆ ಮಾಡಿತ್ತು. ಅದಕ್ಕೇನೆ ಕುಮಾರ್ ಸ್ವಾಮಿ ಇವತ್ತು ಕಾಂಗ್ರೆಸ್ ಪಕ್ಷವನ್ನ ಟೀಕಿಸಿದ್ದಾರೆ.
ಹಾಸನದಲ್ಲಿ ತಂದೆ ಎ.ಮಂಜು ಬಿಜೆಪಿ ಅಭ್ಯರ್ಥಿ.ಕೊಡಗಿನಲ್ಲಿಯ ಇವರೆ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುದಾರ. ಬಿಜೆಪಿ ಸರ್ಕಾರದ ಸಚಿವರ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯದ ಅಭ್ಯರ್ಥಿ. ಅಲ್ಲಿಗೆ ಯಾರು ಬಿ ಟೀಮ್ ಯಾರು ಸಿ ಟೀಮ್ ಅಂತ ತಿಳಿತಲ್ವೇ ಅಂತಲೇ ಹೇಳಿದ್ದಾರೆ ಕುಮಾರ್ ಸ್ವಾಮಿ.
PublicNext
23/11/2021 10:42 pm