ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷದ 25 ಶಾಸಕರನ್ನ ಕಸಕ್ಕೆ ಹೋಲಿಸಿದ್ದಾರೆ.ಆದರೆ ಕೇಜ್ರಿವಾಲ್ ಹೀಗೆ ಹೇಳೋಕೆ ಇರೋ ಆ ಕಾರಣ ಏನು ? ಬನ್ನಿ, ಹೇಳ್ತೀವಿ
ಕಾಂಗ್ರೆಸ್ ಪಕ್ಷದ 25 ಶಾಸಕರು ನಿರಂತರವಾಗಿಯೇ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಆ ಪಕ್ಷಕ್ಕೆ ಬೇಡವಾದ ಕಸಗಳನ್ನೆಲ್ಲ ನಮ್ಮ ಪಕ್ಷದಲ್ಲಿ ಸೇರಿಸಿಕೊಳ್ಳಲು ನಾನು ಸಿದ್ಧನಿಲ್ಲ ಎಂದೇ ಮಾಧ್ಯಮಕ್ಕೆ ಹೇಳಿದ್ದಾರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.
2022 ರ ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲ್ಲೆಯಲ್ಲಿಯೇ ಅರವಿಂದ್ ಕೇಜ್ರಿವಾಲ್ ಮಾಧ್ಯಮಕ್ಕೆ ಮಾತನಾಡಿದ್ದಾರೆ. ಆಗಲೇ ತಮ್ಮ ಮನಸ್ಸಿನಲ್ಲಿರೋ ಕೆಲವು ಸತ್ಯಗಳನ್ನ ಈಗಲೇ ಹೇಳಿಬಿಟ್ಟಿದ್ದಾರೆ. ಇದರ ಪರಿಣಾಮ ಏನ್ ಆಗ್ತದೋ ನೋಡಬೇಕು.
PublicNext
23/11/2021 07:14 pm