ಬಾಗಲಕೋಟೆ: ಪಂಚಮಸಾಲಿ 2 ಎ ಮೀಸಲಾತಿ ನೀಡದೇ ಹೋದರೆ ಸಿ.ಎಂ ಅಧಿಕಾರ ಕಳೆದುಕೊಳ್ತಾರೆ, ಈ ಹಿಂದೆಯೂ ಮೀಸಲಾತಿ ನೀಡದ್ದಕ್ಕೆ ಬಿಎಸ್ವೈ ಅಧಿಕಾರ ಕಳೆದುಕೊಂಡ್ರು, ಈಗ ಮೀಸಲಾತಿ ನೀಡದೇ ಹೋದರೆ ಬೊಮ್ಮಾಯಿ ಅವರಿಗೂ ಅದೇ ಗತಿ ಆಗಬಹುದು ಎಂದು ಬಾಗಲಕೋಟೆ ಜಿಲ್ಲೆಯ ಕಳ್ಳಿಗುಡ್ಡ ಗ್ರಾಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ
ವಿಜಯಾನಂದ ಕಾಶಪ್ಪನವರು ಭವಿಷ್ಯ ನುಡಿದಿದ್ದಾರೆ.
ಸಮಾಜವನ್ನು ಕೆಲವರು ತಮ್ಮ ಅಧಿಕಾರಕ್ಕಾಗಿ ಲಾಭ ಪಡೆದುಕೊಂಡು ಹೋರಾಟಕ್ಕೆ ಹಿಂದೇಟು ಹಾಕಿದ್ರು, ಸ್ವಾಮೀಜಿಯವರ ನೇತೃತ್ವದ ನಮ್ಮ ಹೋರಾಟ ಇಂದು ಒಂದು ತಾಕಿ೯ಕ ಅಂತ್ಯಕ್ಕೆ ಬಂದು ನಿಂತಿದೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ 3 ತಿಂಗಳ ಭರವಸೆ ನೀಡಿದ್ದಾರೆ.ಈಗಾಗಲೇ ಒಂದು ತಿಂಗಳು ಕಳೆದಿದೆ
ಬಿಎಸ್ವೈ ಈ ಹಿಂದೆ ಕೊಟ್ಟ ಅವಧಿಯಲ್ಲಿ ಮೀಸಲಾತಿ ನೀಡದೇ ಇದ್ದದ್ದಕ್ಕೆ ಶಾಪ ತಟ್ಟಿ ಅಧಿಕಾರ ಕಳೆದುಕೊಂಡ್ರು.ಈಗ ಸಿಎಂ ಬೊಮ್ಮಾಯಿ ಮಾಡದೇ ಹೋದ್ರೆ ನಮ್ಮ ಸ್ವಾಮೀಜಿ ಮತ್ತು ಸಮಾಜದ ಶಾಪ ತಟ್ಟದೇ ಹೋಗೋದಿಲ್ಲ ಎಂದು ಖಾರವಾಗಿ ಬೊಮ್ಮಾಯಿಯವರಿಗೆ ಚಾಲೆಂಜ್ ಹಾಕಿದ್ದಾರೆ ಕಾಶಪ್ಪನವರ್.
PublicNext
17/11/2021 11:01 pm