ಕಾರ್ಕಳ: ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಯಾವುದೇ ತೊಂದರೆ ಇಲ್ಲ.ಈ ಅವಧಿ ಮಾತ್ರವಲ್ಲ, ಮುಂದಿನ ಐದು ವರ್ಷಕ್ಕೂ ಬೊಮ್ಮಾಯಿ ಅವರೇ ಸಿಎಂ ಆಗ್ತಾರೆ ಎಂದು ಸಚಿವ ಸುನಿಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು,ಬೊಮ್ಮಾಯಿ ನೇತೃತ್ವದಲ್ಲಿ ನೂರು ದಿನದಲ್ಲಿ ಒಳ್ಳೆಯ ಸಾಧನೆ ಮಾಡಿದ್ದೇವೆ.ಕಡಿಮೆ ಅವಧಿಯಲ್ಕಿ ಹೆಚ್ವು ಜನರನ್ನು ತಲುಪಿದ್ದೇವೆ.ಜನ ಮನ್ನಣೆಗೆ ಪಾತ್ರವಾಗಿರುವ ಸಿಎಂ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.ಸಿಎಂ ವರ್ಚಸ್ಸು ಸಹಿಸದೆ ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹೊಡೆಯುವ ಯತ್ನ ಮಾಡುತ್ತಿದೆ ಎಂದರು.
ನಾವೆಲ್ಲರೂ ಸೇರಿ ಸಿಎಂ ಕೈ ಬಲಪಡಿಸ್ತೇವೆ ಎಂದ ಅವರು,ಜಗದೀಶ್ ಶೆಟ್ಟರ್ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.ಅವರು ಖಾಸಗಿ ಕೆಲಸಕ್ಕೆ ಹೋಗಿರುವುದು ಕೇವಲ ಕಾಕತಾಳೀಯ. ಇನ್ನು ಬಿಟ್ ಕಾಯಿನ್ ವಿಚಾರ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
13/11/2021 07:49 pm