ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರು: ಸಂಸದ ಜಿಎಂ ಸಿದ್ದೇಶ್ವರ್

ದಾವಣಗೆರೆ:ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರಾಗಿದ್ದಾರೆ. ಬಸವರಾಜ್ ಬೊಮ್ಮಾಯಿ ಒಳ್ಳೆ ಆಡಳಿತ ಕೊಡ್ತಿದ್ದಾರೆ. ಅದನ್ನ ನೋಡಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ಅದಕ್ಕೇನೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ದೂರಿದ್ದಾರೆ.

ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರಾಗಿದ್ದಾರೆ. ಅದನ್ನ ತಪ್ಪಿಸಿಕೊಳ್ಳಲು ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ಏನೇನೋ ಆರೋಪ ಮಾಡ್ತಿದ್ದಾರೆ.

ಬಿಟ್ ಕಾಯಿನ್ ಸಂಬಂಧಿಸಿದಂತೆ ಈಗಾಗಲೇ ತನಿಖೆ ಮಾಡುವಂತೆ ಸಿಎಂ ಹೇಳಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಯಾರೇ ಇದ್ದರೂ ಸರಿಯೇ ಅವರ ವಿರುದ್ಧ ಕ್ರಮ ಆಗಲಿ ಅಂತಲೇ ಸಿದ್ದೇಶ್ವರ್ ತಿಳಿಸಿದ್ದಾರೆ.

ಇನ್ನು ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಆಗೋದಿಲ್ಲ ಬಿಡಿ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ 2023 ಕ್ಕೂ ಅಧಿಕಾರಕ್ಕೆ ಬರುತ್ತವೇ ಅಂತಲೇ ಹೇಳಿದ್ದಾರೆ ಸಿದ್ದೇಶ್ವರ್.

Edited By : Nagesh Gaonkar
PublicNext

PublicNext

12/11/2021 10:51 pm

Cinque Terre

73.27 K

Cinque Terre

1

ಸಂಬಂಧಿತ ಸುದ್ದಿ