ಬಾಗಲಕೋಟೆ: ಅತ್ಯಂತ ಅವಾಚ್ಯ ಪದ ಬಳಸಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ಗೆ ಅವಮಾನ ಮಾಡಿದ್ದಾರೆ. ಕಾಶಪ್ಪನವರ ಹೇಳಿಕೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಮಾತನಾಡಿದ ಕಾಶಪ್ಪನವರ್ ಸಾರ್ವಜನಿಕವಾಗಿ ಸಾವರ್ಕರ್ ಬಗ್ಗೆ ಕೆಟ್ಟ ಪದ ಬಳಸಿದ್ದಾರೆ . ಟಿಪ್ಪು ಕೆಚ್ಚೆದೆಯ ಗಂಡು, ಟಿಪ್ಪು ಕಿಂಗ್ ಆಫ್ ಕನಾ೯ಟಕ. ಟಿಪ್ಪು ಸ್ವಾತಂತ್ರ್ಯಕ್ಕೆ ಹೋರಾಡಿದಂತವರು. ಆದ್ರೆ ವೀರ ಸಾವರ್ಕರ್ ಶರಣಾಗತಿಯಿಂದ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡ ಗಾಂ.... ಎಂದು ಕಾಶಪ್ಪನವರ ಬಣ್ಣಿಸಿದ್ದಾರೆ.
ಕಾಶಪ್ಪನವರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದು ಸಾವರ್ಕರ್ ಅಭಿಮಾನಿಗಳು ಈ ಹೇಳಿಕೆಂದ ಆಕ್ರೋಶಿತರಾಗಿದ್ದಾರೆ.
PublicNext
12/11/2021 10:08 am