ಬೆಳಗಾವಿ: ತಾಲೂಕಿನ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿ ಜೊತೆ ರೈತರು, ರೈತ ಮುಖಂಡರು ಇಂದು ಸಭೆ ನಡೆಸಿದರು.
ಸಭೆಯಲ್ಲಿ ಡಿಸಿ ಜೊತೆ ರೈತ ಮುಖಂಡರು ವಾಗ್ವಾದ ನಡೆಸಿದ್ದಾರೆ. ನ್ಯಾಯಾಲಯ ಕಾಮಗಾರಿಗೆ ತಡೆಯೊಡ್ಡಿದಾಗ ನಾವು ರೈತರ ಜಮೀನಿಗೆ ಬಂದಿಲ್ಲ, ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ಕಾಮಗಾರಿ ಆರಂಭಿಸಲಾಗಿದೆ
ಬೈಪಾಸ್ ರಸ್ತೆಯಂತೂ ನಿರ್ಮಾಣ ಮಾಡಿಯೇ ಬದ್ಧ, ಯಾರು ಸಣ್ಣಪುಟ್ಟ ರೈತರಿಗೆ ಕಡಿಮೆ ಪರಿಹಾರ ಬಂದಿದೆ ಅವರಿಗೆ ಹೆಚ್ಚಿನ ಪರಿಹಾರ ನೀಡುತ್ತೇವೆ ಎಂದು ಡಿ ಸಿ ಖಡಕ್ ಆಗಿಯೇ ಮಾತನಾಡಿದರು
ಈಗಾಗಲೇ 824 ರೈತರಿಗೆ 26.97 ಕೋಟಿ ರೂ. ಪರಿಹಾರ ನೀಡಲಾಗಿದೆ, ಇನ್ನುಳಿದ ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸುವ ಕಾರ್ಯ ಮಾಡ್ತೀವಿ, ಇದಕ್ಕಾಗಿಯೇ ವಾರದಲ್ಲಿ ಎರಡು ದಿನ ಸಂಜೆ 5 ರಿಂದ 7 ಗಂಟೆಯವರೆಗೆ ಸಮಯ ಕೊಡ್ತೀವಿ ಎಂದರು.
ಈ ವೇಳೆ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.ರೈತ ಮಹಿಳೆ ಜಯಶ್ರೀ ಮಾತನಾಡಿ ನೀವು ಪರಿಹಾರ ಧನ ಕೊಟ್ಟರೆ ಬಿರಿಯಾನಿ ತಿಂದು, ಸೆರೆ ಕುಡಿದು ಹಾಳು ಮಾಡ್ತಾರೆ.
ನಮ್ಮ ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ಆ ರಸ್ತೆಯಲ್ಲಿ ಭಿಕ್ಷೆ ಬೇಡಬೇಕಾ? ನೀವು ನಮ್ಮ ಹೆಣದ ಮೇಲೆ ರಸ್ತೆ ಮಾಡಿ ಎಂದು ಅಳಲು ತೋಡಿಕೊಂಡರು.
PublicNext
11/11/2021 10:15 pm