ಬೆಂಗಳೂರು: ನಾಡಿನ ಜನತೆಗೆ ಟಿಪ್ಪು ಜಯಂತಿಯ ಶುಭ ಕೋರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಟಿಪ್ಪು ಬಗ್ಗೆ ರಾಜಕೀಯ ಪ್ರೇರಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ' ಎಂದಿದ್ದಾರೆ. ಸಿದ್ದರಾಮಯ್ಯ ಮಾಡಿದ ಟ್ವೀಟ್ ವಿಷಯ ಹೀಗಿದೆ
"ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಮತ್ತು ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ."
"ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ. ನಾಡ ಬಂಧುಗಳಿಗೆ ಟಿಪ್ಪು ಜಯಂತಿಯ ಶುಭಾಶಯಗಳು."
ಸಿದ್ದರಾಮಯ್ಯರ ಈ ಟ್ವೀಟ್‌ಗೆ ಪರ-ವಿರೋಧವಾಗಿ ಜನ ಪ್ರತಿಕ್ರಿಯೆ ನೀಡುತ್ತಿದ್ದಾರೆ. '222 ವರ್ಷಗಳ ಹಿಂದೆಯೇ ಟಿಪ್ಪು ಗತಿಸಿದ್ದರೂ ಈಗಲೂ ಅವರ ಹೆಸರು ಕೇಳಿದರೆ ಭಯಪಡುವವರು ಇದ್ದಾರೆಂದರೆ ಟಿಪ್ಪು ನೈಜ ಹುಲಿ' ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ. 'ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದು ಘನ ನ್ಯಾಯಾಲಯವೇ ಹೇಳಿದೆ. ನೀವು (ಸಿದ್ದರಾಮಯ್ಯ) ಕೇವಲ ಒಂದು ಧರ್ಮವನ್ನು ಓಲೈಕೆ ಮಾಡುವುದಕ್ಕೆ, ಆ ಧರ್ಮದ ಮತಗಳನ್ನು ಪಡೆದು ರಾಜಕೀಯ ಮಾಡುವುದಕ್ಕೆ ಈ ಮತಾಂಧ ಟಿಪ್ಪು ಜಯಂತಿ ಆಚರಣೆ ಮಾಡಿರುವುದು ಎಂದು ರಾಜ್ಯದ ಜನತೆಗೆ ಗೊತ್ತು' ಎಂದು ಮತ್ತೋರ್ವರು ಕಾಮೆಂಟ್ ಹಾಕಿದ್ದಾರೆ.
PublicNext
10/11/2021 12:51 pm