ಭೋಪಾಲ್(ಮಧ್ಯ ಪ್ರದೇಶ): ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ನನ್ನ ಜೇಬಿನಲ್ಲಿದ್ದಾರೆ ಎಂದು ಮಧ್ಯಪ್ರದೇಶ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಸೋಮವಾರ ಹೇಳಿದ್ದಾರೆ. ಬಿಜೆಪಿ ಜಾತಿ ಆಧಾರದಲ್ಲಿ ಮತ ಕೇಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಈ ಹೇಳಿಕೆ ನೀಡಿದ್ದಾರೆ.
ಭೋಪಾಲ್ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನನ್ನ ಎರಡು ಜೇಬಿನಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಇದ್ದಾರೆ. ಬ್ರಾಹ್ಮಣ ಕಾರ್ಯಕರ್ತರಿದ್ದಾಗ ಅದನ್ನು ಬ್ರಾಹ್ಮಣರ ಪಕ್ಷ ಎಂದು ಕರೆಯಲಾಗುತ್ತಿತ್ತು. ಬನಿಯಾ ಕಾರ್ಯಕರ್ತರು ಇದ್ದಾಗ ಅದನ್ನು ‘ಬನಿಯಾ’ಗಳ ಪಕ್ಷ ಎಂದು ಕರೆಯಲಾಗುತ್ತಿತ್ತು. ಬಿಜೆಪಿ ಎಲ್ಲರಿಗೂ ಇರುತ್ತದೆ,” ಎಂದಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಮುರಳೀಧರ ರಾವ್ ಅವರ ಟೀಕೆಗಳಿಗೆ ಕಟುವಾಗಿ ಟೀಕಿಸಿದ್ದಾರೆ ಮತ್ತು ಬಿಜೆಪಿ ನಾಯಕರು ‘ಬ್ರಾಹ್ಮಣ’ ಮತ್ತು ‘ಬನಿಯಾ’ ಸಮುದಾಯಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಘೋಷಣೆಯನ್ನು ನೀಡುವ ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿ ಮುಖಂಡ ಈಗ ನಮ್ಮ ಜೇಬಿನಲ್ಲಿ ಬ್ರಾಹ್ಮಣರು, ಒಂದು ಜೇಬಿನಲ್ಲಿ ಬನಿಯಾ ಇದ್ದಾರೆ ಎಂದು ಹೇಳುತ್ತಿದ್ದಾರೆ.” ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.
PublicNext
09/11/2021 03:39 pm