ಮುಂಬೈ: ತೈಲ ದರ 50 ರೂ.ಗೆ ಇಳಿಕೆಯಾಗಬೇಕಾದರೆ ದೇಶದ ಜನತೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಲೇಬೇಕು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 5 ರೂ. ಮತ್ತು 10 ರೂ.ನಷ್ಟು ಕಡಿತಗೊಳಿಸಿದೆ. ಇದು ದೇಶಸ ಜನತೆಗೆ ಕೇಂದ್ರ ಸರ್ಕಾರ ಕೊಟ್ಟ ದೀಪಾವಳಿ ಗಿಫ್ಟ್ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.
ಆದ್ರೆ ಬೆಲೆ ಇಳಿಕೆಯನ್ನು ಟೀಕಿಸಿರುವ ಸಂಸದ ಸಂಜಯ್ ರಾವತ್, ದೇಶದ ಜನರಿಗೆ ಹೊರೆಯಾಗಿರುವ ಇಂಧನ ಬೆಲೆಯನ್ನು 100ರೂ.ಗೆ ಏರದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ದೇಶದಲ್ಲಿ ಕೆಲ ದಿನಗಳಿಂದ ನಿಂತರವಾಗಿ ತೈಲಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಬೆಲೆ 100 ರೂ.ಗಿಂತಲೂ ಅಧಿಕವಾಗಿದೆ. ಜನರು ಸಾಲ ಮಾಡಿ ಹಬ್ಬ ಆಚರಿಸುವಂತಾಗಿದೆ. ಇಂಧನ ಬೆಲೆಯನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂದಿದ್ದಾರೆ.
PublicNext
05/11/2021 09:16 am