ನವದೆಹಲಿ : ಎಲ್ಲರ ದೀಪಾವಳಿಗಿಂತಲೂ ಪ್ರಧಾನಿ ಮೋದಿಯವರ ದೀಪಾವಳಿ ಕೊಂಚ ವಿಶೇಷವಾಗಿರುತ್ತದೆ. ಯಾಕೆಂದರೆ ಅವರು ಈ ಹಬ್ಬವನ್ನು ಯೋಧರೊಂದಿಗೆ ಆಚರಿಸುತ್ತಾರೆ.ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ಭಾರತೀಯ ಸೈನಿಕರನ್ನು ಭೇಟಿಯಾಗಲೆಂದು ಜಮ್ಮು ಕಾಶ್ಮೀರಕ್ಕೆ ತೆರಳುವ ವೇಳೆ ದೆಹಲಿಯಲ್ಲಿ ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಯಾಣಿಸಿದ್ದಾರೆ.
ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದತ್ತ ಹೊರಟ ಪ್ರಧಾನಿ, ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವಾಗ ಸಂಚಾರ ನಿರ್ಬಂಧವಿಲ್ಲದೇ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಇಂದು ಮುಂಜಾನೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ, ಅಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿ, 'ನಾನು ಇಲ್ಲಿ ಪ್ರಧಾನಿಯಾಗಿ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ದೀಪಾವಳಿ ಆಚರಿಸಲು ಬಂದಿದ್ದೇನೆ' ಎಂದಿದ್ದಾರೆ.
PublicNext
04/11/2021 07:56 pm