ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಹೌದು ದೀಪಾವಳಿ ಆಚರಣೆ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ‘ಮೋದಿ ಸರ್ಕಾರ ಜನರಿಗಾಗಿ ಸಂವೇದನಾಶೀಲ ಹೃದಯವನ್ನು ಹೊಂದಬೇಕೆಂದು ಆಶಿಸುತ್ತೇನೆ‘ ಎಂದು ಹೇಳಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಇದು ದೀಪಾವಳಿ ಆಚರಿಸುವ ಸಮಯ. ಅಗತ್ಯ ವಸ್ತುಗಳ ಬೆಲೆಗಳು ಉತ್ತುಂಗದಲ್ಲಿವೆ. ಇದು ವ್ಯಂಗ್ಯದ ವಿಷಯವಲ್ಲ. ಮೋದಿ ಸರ್ಕಾರ, ಸಾರ್ವಜನಿಕರ ಬಗ್ಗೆ ಸೂಕ್ಷ್ಮ ಹೃದಯ ಹೊಂದಬೇಕೆಂದು ನಾನು ಬಯಸುತ್ತೇನೆ‘ ಎಂದು ಹೇಳಿದ್ದಾರೆ.
PublicNext
03/11/2021 03:10 pm