ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ 'ಹೊಟ್ಟೆಗೆ ಏನ್ ತಿಂತಿಯಾ?' ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಸೋಮವಾರ ಗುಬ್ಬಿ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತ ಹೇಳಿದರು. ದೇವೇಗೌಡ್ರನ್ನು ತುಮಕೂರು ಲೋಕಸಭೆ ಚುನಾವಣೆಯಲ್ಲಿ ನಾನು ಸೋಲಿಸಿದೆ ಅಂತ ನೀನು ಹೇಳ್ತೀಯಾ ಆದ್ರೆ, ನೀನು ಹೊಟ್ಟೆಗೆ ಏನು ತಿಂತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ನಾನು ತಾಯಿಗೆ ಮೋಸ ಮಾಡುವ ಕೆಲಸವನ್ನು ಮಾಡುವುದಿಲ್ಲ, ಬೇಕಿದ್ದರೆ ಆಣೆ ಪ್ರಮಾಣವನ್ನು ಮಾಡಲು ಸಿದ್ದನಿದ್ದೇನೆ, ನೀನು ಸಿದ್ಧ ಇದ್ದೀಯ? ಅಂತ ಅವರು ಮಾಜಿ ಸಿಎಂ ಹೆಚ್‌ಡಿಕೆಗೆ ನೇರ ಸವಾಲು ಹಾಕಿದ್ದಾರೆ.
PublicNext
02/11/2021 08:49 am