ಗೋರಖ್‌ಪುರ:ಕಾಂಗ್ರೆಸ್ ಪಕ್ಷ ಎಂದಿಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಜೊತೆಗೆ ಶಾಮೀಲಾಗಿ ಇಲ್ಲಿವರೆಗೂ ಯಾವುದೇ ಕೆಲಸವನ್ನೂ ಮಾಡಿಲ್ಲ. ಅಂತಹ ಪರಿಸ್ಥಿತಿ ಬಂದ್ರೆ ನಾನು ಜೀವ ಕೊಡುತ್ತೇನೆ ಹೊರತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದೇ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಡಕ್ ಆಗಿಯೇ ಹೇಳಿದ್ದಾರೆ. ಆದರೆ ಇದನ್ನ ಈಗ ಹೇಳಿದ್ದ್ಯಾಕೆ ? ಇಲ್ಲಿದೆ ನೋಡಿ ಪ್ರಿಯಾಂಕಾ ಮಾತಿನ ಆ ಫುಲ್ ವೀಡಿಯೋ.
ಕಾಂಗ್ರೆಸ್ ಪಕ್ಷವನ್ನ ಸಮಾಜವಾದಿ ಪಕ್ಷ (SP) ಹಾಗೂ ಬಹು ಜನ ಸಮಾಜವಾದಿ (BSP)ಪಕ್ಷಗಳು ತರಾಟೆ ತೆಗೆದುಕೊಂಡಿವೆ. ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಸೇರಿ ಕೆಲಸ ಮಾಡುತ್ತಿದೆ ಅಂತಲೂ ಆರೋಪಿಸಿವೆ. ಇದಕ್ಕೆ ಪ್ರತಿಯಾಗಿಯೇ ಪ್ರಿಯಾಂಕಾ ಗಾಂಧಿ ಗೋರಖ್‌ಪುರದ ಬಹಿರಂಗ ಸಭೆಯಲ್ಲಿಯೇ ಜನರನ್ನುದ್ದೇಶಿಸಿ ಈಗ ಮಾತನಾಡಿದ್ದಾರೆ. ಇಲ್ಲಿವರೆಗೂ SP ಆಗಲಿ BSP ಆಗಲಿ ನಿಮ್ಮ ಕಷ್ಟಗಳನ್ನ ಯಾಕೆ ಕೇಳಿಲ್ಲ. ಆದರೆ ಜನರ ಕಷ್ಟಕ್ಕಾಗಿಯೇ ಕಾಂಗ್ರೆಸ್ ಒಂಟಿಯಾಗಿಯೇ ಹೋರಾಡುತ್ತಿದೆ ಹೊರತು ಬಿಜೆಪಿ ಜೊತೆಗೆ ಶಾಮೀಲಾಗಿ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ ಅಂತಲೇ ಖಾರವಾಗಿಯೇ ಹೇಳಿದ್ದಾರೆ ಪ್ರಿಯಾಂಕಾ ಗಾಂಧಿ.
PublicNext
31/10/2021 03:54 pm